ಮೈಸೂರು : ಆಟೋದಲ್ಲಿ ವೀಲಿಂಗ್ ಮಾಡಿ ಪುಂಡಾಟ ತೋರಿದ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ. ಗುಮ್ಮಟಗಿರಿ - ಮನುಗನಹಳ್ಳಿ ರಸ್ತೆಯಲ್ಲಿ ಸ್ನೇಹಿತನ ಜೊತೆಗೂಡಿ ಆಟೋ ವೀಲಿಂಗ್ ಮಾಡಿ ವಿಡಿಯೋ ಮಾಡಿರುವ ಅಶೋಕ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಅಶೋಕ್ ವೀಲಿಂಗ್ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಈ ವಿಡಿಯೋ ವೀಕ್ಷಿಸಿದ ಹುಣಸೂರು ಗ್ರಾಮಾಂತರ ಪೊಲೀಸರು ಸ್ವಯಂಕೃತ ಕೇಸ್ ದಾಖಲಿಸಿಕೊಂಡು ಚಾಲಕನ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ಆಟೋ ವಶಕ್ಕೆ ಪಡೆದಿರುವ ಪೊಲೀಸರು ಚಾಲಕನ ಹುಚ್ಚಾಟವನ್ನ ಬಿಡಿಸಿದ್ದಾರೆ.