ನಾಳೆಯಿಂದ (ಜನವರಿ 14) ದೆಹಲಿಯಲ್ಲಿ ಆರಂಭವಾಗಲಿರುವ ಇಂಡಿಯಾ ಓಪನ್ ಸೂಪರ್ 750 - ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ 21 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.. ಇದು ತವರಿನ ಪಂದ್ಯಾವಳಿಯಲ್ಲಿ ಭಾರತದ ಅತ್ಯಧಿಕ ಸಂಖ್ಯೆಯ ಶಟ್ಲರ್‌ಗಳ ಪಾಲ್ಗೊಳ್ಳುವಿಕೆಯ ದಾಖಲೆ ಆಗಿದೆ.. ಸ್ಟಾರ್ ಆಟಗಾರರಾದ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಈ ಪಂದ್ಯಾವಳಿಯ ಪ್ರಮುಖ ಆಕರ್ಷಣೆ ಆಗಲಿದ್ದಾರೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿಂಧು ಮೊದಲ ಸಲ ಸ್ಪರ್ಧೆಗೆ ಇಳಿಯಲಿದ್ದಾರೆ.. ಪುರುಷರ ಸಿಂಗಲ್ಸ್‌ನಲ್ಲಿ 3, ವನಿತಾ ಸಿಂಗಲ್ಸ್ ನಲ್ಲಿ 4, ಪುರುಷರ ಡಬಲ್ಸ್‌ನಲ್ಲಿ 2, ವನಿತಾ ಡಬಲ್ಸ್‌ನಲ್ಲಿ 8, ಮಿಶ್ರ ಡಬಲ್ಸ್‌ನಲ್ಲಿ 4 ಮಂದಿ ಒಟ್ಟು 21 ಸ್ಪರ್ಧಿಗಳು ಬ್ಯಾಡ್ಮಿಂಟನ್ ಫೈಟ್‌ಗೆ ಸಜ್ಜಾಗಿದ್ದಾರೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಇಂಡಿಯಾ ಓಪನ್‌ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದ್ದೇನೆ. ನಾನು ನಿಜವಾಗಿಯೂ ಇದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.. ನಾನು ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯಲು ಸಾಧ್ಯವಾಗಲಿಲ್ಲ, ಆದರೆ ಮುಂಬರುವ ಪಂದ್ಯಾವಳಿಗಳತ್ತ ಮತ್ತೆ ಗಮನ ಹರಿಸುವ ಸಮಯ ಇದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ..