ಮುಂಬೈ: ಇನ್ನುಮುಂದೆ ನಮ್ಮ ಖಾತೆಯಲ್ಲಿ ಕನಿಷ್ಟ ಮೊತ್ತ ಇರಲೇಬೇಕು. ಠೇವಣಿದಾರರು ಕನಿಷ್ಟ ಮೊತ್ತವನ್ನಿರಿಸಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನ ಜಾರಿಗೆ ತರಲಿದ್ದು, ಹೊಸ ನಿಯಮ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ಗ್ರಾಹಕರು ಉಳಿತಾಯ ಖಾತೆಯಲ್ಲಿ ಒಂದು ವರ್ಷದೊಳಗೆ 10 ಲಕ್ಷ ರೂ ಅಥವಾ ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಬಹುದು. ಹಣ ಜಮೆ ಮಾಡುವಾಗ ತೆರಿಗೆ ಮತ್ತು ಶುಲ್ಕಗಳ ಬಗ್ಗೆ ನಮ್ಮ ಬ್ಯಾಂಕ್‌ನಿಂದ ತಿಳಿದುಕೊಳ್ಳುವುದು.
ರಿಸರ್ವ್ ಬ್ಯಾಂಕ್ ನ ಹೊಸ ನಿಯಮಗಳ ಪ್ರಕಾರ, ಬ್ಯಾಂಕ್‌ಗಳ ಖಾತೆಯಲ್ಲಿ ಕನಿಷ್ಠ ಮೊತ್ತವನ್ನ ಉಳಸಿಕೊಳ್ಳದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಬಹುದಿನಗಳ ಬಳಿಕ ಖಾತೆಗೆ ಹಣ ಜಮೆ ಆದ್ರೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದ್ದಕ್ಕೆ ದಂಡ ಕಡಿತಗೊಳಿಸಲಾಗುತ್ತದೆ. ಆ ಮೂಲಕ ಬ್ಯಾಂಕುಗಳು ಕನಿಷ್ಟ ಬ್ಯಾಲೆನ್ಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುತ್ತವೆ.