ಮೈಸೂರು : ಮಗ ಮೊಮ್ಮಗನ ಜಗಳ ಬಿಡಿಸಲು ಹೋದ ಅಜ್ಜಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಅಲ್ಲಯ್ಯನಪುರ ಗ್ರಾಮದಲ್ಲಿ ನಡೆದಿದೆ.
ದಿನನಿತ್ಯದ ಖರ್ಚಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಅಪ್ರಪ್ತ ಮಗ ತಂದೆಯ ನಡುವೆ ಜಗಳ ನಡೆದಿದೆ. ಅಪ್ಪನಿಗೆ ಹಣಕ್ಕಾಗಿ ಮಗ ಪೀಡಿಸಿದ್ದಾರೆ. ಮಗ ಮಹೇಶ್ ಅಪ್ರಾಪ್ತ ಮೊಮ್ಮಗನ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಮಧ್ಯ ಅಜ್ಜಿ ನಾಗಮ್ಮ ತೆರಳಿದ್ದಾರೆ. ಈ ವೇಳೆ ಅಜ್ಜಿಯ ಜುಟ್ಟು ಹಿಡಿದು ಕಾಂಕ್ರೀಟ್ ರಸ್ತೆಗೆ ಎಳೆದು ತಂದ ಮೊಮ್ಮಗ ಜೋರಾಗಿ ತಳ್ಳಿದ್ದಾನೆ. ತಲೆಗೆ ಪೆಟ್ಟುಬಿದ್ದ ಕಾರಣ ಅಜ್ಜಿ ನಾಗಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ನಾಗಮ್ಮ(80) ಮೊಮ್ಮಗನ ಕೋಪಕ್ಕೆ ಬಲಿಯಾದ ಅಜ್ಜಿ ಎಂದು ಗುರುತಿಸಲಾಗಿದೆ. ಅಜ್ಜಿಯ ಜೀವ ತೆಗೆದು ಅಪ್ರಾಪ್ತ ಮೊಮ್ಮಗ ನಾಪತ್ತೆಯಾಗಿದ್ದಾನೆ. ಮೃತ ಅಜ್ಜಿಯ ಸಹೋದರ ನಾಗಣ್ಣ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಮ್ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.