ಕರ್ನಾಟಕ

ರೌಡಿ ಹೈದರ್ ಅಲಿ ಹತ್ಯೆಗೆ ಪ್ರತೀಕಾರ ಶುರುವಾಯ್ತಾ..?

ನಿನ್ನೆ ಕೂಡ ಮಡಿವಾಳ ಸಂಚಾರಿ ಪೊಲೀಸರು ರಾತ್ರಿ ಡ್ರಂಕ್ ಆ್ಯಂಡ್ ಡ್ರೈವ್ ಕೇಸನ್ನ ಹಾಕ್ತಾ ಕೋರಮಂಗಲದ ರಸ್ತೆಯಲ್ಲೇ ನಿಂತಿತ್ತು. ಈ ವೇಳೆ ಫೋರಂ ಮಾಲ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಆರ್ ಟಿ ಓ ರಿಜಿಸ್ಟ್ರೇಷನ್ ನ ಐಟ್ವೆಂಟಿ ಕಾರನ್ನ ಪರಿಶೀಲನೆ ನಡೆಸೋಕೆ ಪೊಲೀಸರು ಮುಂದಾಗಿದ್ದರು.

ಬೆಂಗಳೂರು : ರೌಡಿಶೀಟರ್ ಹೈದರ್ ಅಲಿ ಕೊಲೆ ಸಂಬಂಧ ಆರೋಪಿಯಾದ ನಾಜಿಮ್ ಹಾಗೂ ಆತನ ಟೀಂ ಬೆಂಗಳೂರಿನ ಅಶೋಕ್ ನಗರ ಪೊಲೀಸರಿಗೆ ಸೆರೆಂಡರ್ ಆಗಿದೆ. ಇದೀಗ ಪ್ರಮುಖ ಆರೋಪಿ ನಾಜಿಮ್ ನ ಟೀಂಗೆ ಗುಂಡಿ ತೋಡೋಕೆ ಸುಪಾರಿ ಟೀಂಗಳು ಬೆಂಗಳೂರಿನಾದ್ಯಂತೆ ಓಡಾಡೋಕೆ ಶುರುವಾಗಿದೆ.

ನಿನ್ನೆ ಕೂಡ ಮಡಿವಾಳ ಸಂಚಾರಿ ಪೊಲೀಸರು ರಾತ್ರಿ ಡ್ರಂಕ್ ಆ್ಯಂಡ್ ಡ್ರೈವ್ ಕೇಸನ್ನ ಹಾಕ್ತಾ ಕೋರಮಂಗಲದ ರಸ್ತೆಯಲ್ಲೇ ನಿಂತಿತ್ತು. ಈ ವೇಳೆ ಫೋರಂ ಮಾಲ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಆರ್ ಟಿ ಓ ರಿಜಿಸ್ಟ್ರೇಷನ್ ನ ಐಟ್ವೆಂಟಿ ಕಾರನ್ನ ಪರಿಶೀಲನೆ ನಡೆಸೋಕೆ ಪೊಲೀಸರು ಮುಂದಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳ ಪೈಕಿ‌ ಮೂವರು ಕಾರಿನಿಂದಿಳಿದು ಪರಾರಿಯಾಗಿದ್ದರು. ಕಾರಿನಲ್ಲಿದ್ದ ಹೈದರ್ ಎಂಬಾತನನ್ನ ಹಿಡಿದ ಪೊಲೀಸರು ಕಾರನ್ನ ಪರಿಶೀಲನೆ ಮಾಡಿದ ಸಮಯದಲ್ಲಿ ಡ್ಯಾಶ್ ಬೋರ್ಡ್ ನಲ್ಲಿ ಕಂಟ್ರಿಮೇಡ್ ಪಿಸ್ತೋಲ್ ಹಾಗೂ ಡ್ರಾಗರ್ ಗಳು ಪತ್ತೆಯಾಗಿದೆ. 

ಇನ್ನು ಕಾರಿ‌ನಲ್ಲಿ ಮಾದಕ ವಸ್ತುವನ್ನ ಅಳೆಯುವಂತಹ ಸಾಧನ ಕೂಡ ದೊರೆತಿದ್ದು ತಕ್ಷಣ ಟ್ರಾಫಿಕ್ ಪೊಲೀಸ್ನವ್ರು ಆರೋಪಿಯನ್ನ ಕೋರಮಂಗಲ ಲಾ&ಆರ್ಡರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಿಕ್ಕ ಆರೋಪಿಯಿಂದ ಮಹತ್ತರವಾದ ಮಾಹಿತಿಯನ್ನ ಕಲೆಹಾಕ್ತಿದ್ದಾರೆ‌.