ಕರ್ನಾಟಕ

ಆದಷ್ಟು ಬೇಗ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಸರಿಹೋಗುತ್ತದೆ : ಶ್ರೀನಿವಾಸ್‌ ಪುಜಾರಿ

ಸರ್ಕಾರ ಕುರುಡರ ರೀತಿ ನಡೆದುಕೊಳ್ಳುತ್ತಿದೆ. ಅದನ್ನ ಎಚ್ಚರಿಸುವ ಕೆಲಸ ಮಾಡ್ತೇವೆ. ಕೆಟ್ಟ ಮನಸ್ಥಿತಿಯಲ್ಲಿ ಸರ್ಕಾರ ಕೆಲಸ ಮಾಡ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಶ್ರೀನಿವಾಸ್‌ ಪುಜಾರಿ ಆಕ್ರೋಶ ಹೊರಹಾಕಿದ್ದಾರೆ.

ಮಂಡ್ಯ : ಬಿಜೆಪಿಯ ಒಳ ಜಗಳ ವಿಚಾರಕ್ಕೆ ಕಾರ್ಯಕರ್ತರಷ್ಟೇ ನನಗೂ ನೋವಾಗಿದೆ. ಶೀರ್ಘದಲ್ಲೇ ಎಲ್ಲಾ ಗೊಂದಲಕ್ಕೂ ತೆರೆ ಬೀಳುತ್ತದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿಯವರು ದೊಡ್ಡ ರಾಜಕೀಯ ಪಕ್ಷದಲ್ಲಿ ಅಭಿಪ್ರಾಯ, ಭಿನ್ನಾಭಿಪ್ರಾಯ ಸಹಜ. ನಮ್ಮ ಹೈಕಮಾಂಡ್ ನಮ್ಮ ನಾಯಕರನ್ನ ಒಗ್ಗೂಡಿಸಿ ಕೆಲವೇ ದಿನಗಳಲ್ಲಿ ಪರಿಹಾರ ಕೊಡ್ತಾರೆ. ಆದಷ್ಟು ಬೇಗ ಈ ಸಮಸ್ಯೆ ಸರಿಪಡಿಸುವ ಕೆಲಸ ಆಗುತ್ತೆ. ನಾವೆಲ್ಲರು ಒಂದಾಗಿ ಹೋರಾಟ ಮಾಡ್ತೇವೆ. ಸರ್ಕಾರಕ್ಕೆ ಸದ್ಯದಲ್ಲೇ ಬಿಸಿ ಮುಟ್ಟಿಸುವ  ಕೆಲಸ ಮಾಡ್ತೇವೆ. ನಮ್ಮ ಪಕ್ಷವನ್ನ ಮತ್ತೆ ಶಿಸ್ತಿನ ವ್ಯಾಪ್ತಿಗೆ ತರ್ತೇವೆ ಎಂಬ ವಿಶ್ವಾಸವನ್ನ ಮೂಡಿಸಿದ್ದಾರೆ. 

ಕೆಲವು ಬಾರಿ ಈ ತರಹದ ಘಟನೆ ಸಹಜ. ನಿರ್ಬಂಧಿಸಿ ಸರಿಯಾದ ಪರಿಹಾರ ಕೊಂಡುಕೊಳ್ಳಬೇಕು. ಈ ಗೊಂದಲಕ್ಕೆ ಶೀಘ್ರವಾಗಿ ತೆರೆ ಎಳೆಯುತ್ತೇವೆ. ಪ್ರಭಲ ಪಕ್ಷವಾಗಿ ಹೋರಾಟ ಮಾಡ್ತೇವೆ. ರಾಜ್ಯದ ಮುಖಂಡತ್ವದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದಾಗ ಆತಂಕ ಆಗುತ್ತೆ. ಆದಷ್ಟೂ ಬೇಗ ಇದಕ್ಕೆ ತೆರೆ ಬೀಳುತ್ತೆ. ಮೂಡಾ ಸೇರಿ ಹಲವಾರು ಹೋರಾಟ ಮಾಡ್ತಿದ್ದೇವೆ. ಸರ್ಕಾರ ಕುರುಡರ ರೀತಿ ನಡೆದುಕೊಳ್ಳುತ್ತಿದೆ. ಅದನ್ನ ಎಚ್ಚರಿಸುವ ಕೆಲಸ ಮಾಡ್ತೇವೆ. ಕೆಟ್ಟ ಮನಸ್ಥಿತಿಯಲ್ಲಿ ಸರ್ಕಾರ ಕೆಲಸ ಮಾಡ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಶ್ರೀನಿವಾಸ್‌ ಪುಜಾರಿ ಆಕ್ರೋಶ ಹೊರಹಾಕಿದ್ದಾರೆ.