ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರ ತಂಡವೊಂದು ಪ್ಯಾಲೆಸ್ತೀನ್ ಧ್ವಜವನ್ನು ಹಿಡಿದು ಬೈಕ್ನಲ್ಲಿ ಸುತ್ತಾಡಿ ಪುಂಡಾಟ ಮೆರೆದಿದೆ. ಈ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದ್ಯ ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ನಾಲ್ವರು ಅಪ್ರಾಪ್ತರು ನಗರದಾದ್ಯಂತ ಧ್ವಜ ಹಿಡಿ ರೌಂಡ್ಸ್ ಹಾಕಿದ್ದು, ಈಗಾಗಲೇ ಬಾಲಕರನ್ನ ವಶಕ್ಕೆ ಪಡೆಯಲಾಗಿದೆ. ಯುವಕರನ್ನ ವಶಕ್ಕೆ ಪಡೆದು, ಅವರಿಗೆ ಪ್ಯಾಲೆಸ್ತೀನ್ ಧ್ವಜ ಹೇಗೆ ಸಿಕ್ಕಿತು? ಇದರ ಹಿಂದೆ ಯಾವುದಾದರು ಸಂಘಟನೆಗಳ ಕುಮ್ಮಕ್ಕಿದೆಯಾ ಎಂಬ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೂ ಕೋಮು ಸೂಕ್ಷ್ಮ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಗಲಭೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಇಂದು ಈದ್-ಮಿಲಾದ್ ಹಬ್ಬವಿದ್ದು, ಈ ಬೆನ್ನಲ್ಲೇ ಪ್ಯಾಲೆಸ್ತೀನ್ ಧ್ವಜ ಮೆರೆವಣಿಗೆ ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.