ಕರ್ನಾಟಕ

ZP, TP ಚುನಾವಣೆಗೆ ಸಜ್ಜಾದ ದೋಸ್ತಿ ಪಕ್ಷಗಳು, ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಬೃಹತ್‌ ಪ್ರತಿಭಟನೆ..!

ಮೈಸೂರು‌ ವಿವಿಯೊಂದಿಗೆ ವಿಲೀನಗೊಳಿಸಲು ಸರ್ಕಾರ ಚಿಂತನೆ ಮಾಡಿದೆ, ಆದರೆ ಸರ್ಕಾರದ ನಿರ್ಧಾರ ಮಂಡ್ಯ ಅಸ್ಮಿತೆಗೆ ಧಕ್ಕೆ ತಂದಿದೆ ಎಂದು ಮೈತ್ರಿ ನಾಯಕರು ಕಿಡಿ ಕಾರಿದ್ದಾರೆ.

ಮಂಡ್ಯ:   ZP,TP ಚುನಾವಣೆ ಸನಿಹ ಬರುತ್ತಿರುವ ಹಿನ್ನಲೆ ಮೈತ್ರಿ ಗಟ್ಟಿಗೊಳಿಸಲು ದೋಸ್ತಿ ಪಕ್ಷಗಳು ಮುಂದಾಗಿವೆ. ಇಂದು ಮಂಡ್ಯದಲ್ಲಿ ಬೆಳ್ಳಿಗೆ 11 ಗಂಟೆಗೆ ವಿವಿ ಮುಚ್ಚುವ ನಿರ್ಧಾರದ ವಿರುದ್ದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೃಹತ್‌ ಪ್ರತಿಭಟನೆ ಮಾಡುವ ಮೂಲಕ ಕೈ ಸರ್ಕಾರದ ವಿರುದ್ದ ಮೈತ್ರಿ ಪಡೆ ಸಮರ ಸಾರಲ್ಲಿದ್ದಾರೆ. 

ಮೈಸೂರು‌ ವಿವಿಯೊಂದಿಗೆ ವಿಲೀನಗೊಳಿಸಲು ಸರ್ಕಾರ ಚಿಂತನೆ ಮಾಡಿದೆ, ಆದರೆ ಸರ್ಕಾರದ ನಿರ್ಧಾರ ಮಂಡ್ಯ ಅಸ್ಮಿತೆಗೆ ಧಕ್ಕೆ ತಂದಿದೆ ಎಂದು ಮೈತ್ರಿ ನಾಯಕರು ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್‌ ಸರ್ಕಾರ ಬಿಜೆಪಿ ಸರ್ಕಾರದ ಕೊಡುಗೆ ಕಿತ್ತುಕೊಳ್ಳಲು ಸಂಚು ನಡೆಸಿದೆ, ಈ ಮೂಲಕ ಸರ್ಕಾರ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಕಿಡಿ. ಹೀಗಾಗಿ ವಿವಿ ವಿಲೀನಗೊಳಿಸುವ ನಿರ್ಧಾರ ಕೈಬಿಡುವಂತೆ ಆಗ್ರಹ ಮಾಡಿ ಮೈತ್ರಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಈ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವತ್ ನಾರಾಯಣ್, ‌ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಸೇರಿದಂತೆ ಮಾಜಿ ಶಾಸಕರು, ಮುಖಂಡರು ಭಾಗಿಯಾಗಲ್ಲಿದ್ದಾರೆ