ಕರ್ನಾಟಕ

ಜಾಮೀನಿನ ಮೇಲೆ ಹೊರ ಬಂದ ದರ್ಶನ್‌ಗೆ ಮತ್ತೆ ಕಾಡ್ತಿದೆ ಮೂರು ಸಂಕಷ್ಟ

ಜಾಮೀನು ಸಿಕ್ಕಿ ಸ್ವಲ್ಪ ನೆಮ್ಮದಿಯಾಗಿದ್ದ ದರ್ಶನ್ ಗೆ ಈಗ ಮೂರು ಮೂರು‌ ಸಂಕಷ್ಟ ಎದರಾಗಿದ್ದೆ, ಎಲ್ಲಾ ಸವಾಲುಗಳನ್ನ ದರ್ಶನ್‌ ಹೇಗೆ ಪರಿಹರಿಸಿಕೊಳ್ಳಲಿದ್ದಾರೆ ಎಂಬುದೇ ದೊಡ್ಡ ಕುತೂಹಲವಾಗಿದೆ.

ಬೆಂಗಳೂರು : ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ದರ್ಶನ್‌ಗೆ ಸಂಕಷ್ಟಗಳು ಕೊನೆಯಾಗುವ ಯಾವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ದರ್ಶನ್‌ಗೀಗ ಮತ್ತೆ ಮೂರು ಸಂಕಷ್ಟಗಳು ಎದುರಾಗಿವೆ. ಜಾಮೀನು ಪಡೆದು ತುಸು ನೆಮ್ಮದಿಯಾಗಿದ್ದ ದರ್ಶನ್ ಗೆ ಈಗ ಮೂರು ಸಂಕಷ್ಟಗಳ ಸರಮಾಲೆ ಎದುರಾಗಿದೆ. 

ದರ್ಶನ್ ಗೆ ಶುರುವಾಗಿದೆ ಈಗ ಮೂರು‌ ಸಂಕಷ್ಟ :
1)ದರ್ಶನ್ ಗೆ ಪೊಲೋಸರ ಸುಪ್ರೀಂ ಕೋರ್ಟ್ ಮೇಲ್ಮನವಿ ಚಿಂತೆ
ಈಗಾಗಲೇ ದರ್ಶನ್ ಪವಿತ್ರಾ ಸೇರಿ ಏಳು ಆರೋಪಿಗಳ ಜಾಮೀನು ರದ್ದುಕೋರಿ ಸುಪ್ರೀಂ ನಲ್ಲಿ ಅರ್ಜಿ‌ಸಲ್ಲಿಸಲಾಗಿದೆ. ಹೀಗಾಗಿ ಇದು ಏನಾಗುತ್ತೋ ಎನ್ನುವ ಭಯ ಇದೆ.‌ಮಾರ್ಚ್ ಮಧ್ಯ ಭಾಗದಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದ್ದು ದರ್ಶನ್ ಪರ ಕಪಿಲ್ ಸಿಬಲ್ ವಾದ ಮಾಡಲಿದ್ದಾರೆ.

2) ದರ್ಶನ್ ಗೆ ಇನ್ನೂ ಸಿಕ್ಕಿಲ್ಲ ಆನಾರೋಗ್ಯದಿಂದ ಮುಕ್ತಿ
ಇತ್ತ ದರ್ಶನ್ ಗೆ ಇನ್ನೂ ಆನಾರೋಗ್ಯದಿಂದ ಮುಕ್ತಿ ಸಿಕ್ಕಿಲ್ಲ, ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಅಪರೇಶನ್ ಮಾಡಬೇಕ ಬೇಡ್ವಾ ಎನ್ನುವ ಚಿಂತೆ ಮುಂದುವರೆದಿದೆ.

3) ಇವುಗಳ ನಡುವೆ ಮಾಫಿ ಸಾಕ್ಷ್ಯದ ಸಂಕಷ್ಟ.!
ಒಂದ್ ಕಡೆ ಸುಪ್ರೀಂ ಕೋರ್ಟ್ , ಮತ್ತೊಂದು ಕಡೆ ಆನಾರೋಗ್ಯ ಆದ್ರೆ ಇತ್ತ ಈಗ ಮಾಫಿ ಸಾಕ್ಷಿ ಭೀತಿ ಶುರುವಾಗಿದೆ. ಕೊಲೆ ಪ್ರಕರಣದ ಆರೋಪಿಗಳೆ ದರ್ಶನ್ ವಿರುದ್ದ ಸಾಕ್ಷಿ ನುಡಿದ್ರೆ ದರ್ಶನ್ ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ, ಹೀಗಾಗಿ ಈ ಸಂಕಷ್ಟದಿಂದಲೂ ಪಾರಾಗಲು ದರ್ಶನ್ ಪರದಾಟ ನಡೆಸುತ್ತಿದ್ದಾರೆ.

ಜಾಮೀನು ಸಿಕ್ಕಿ ಸ್ವಲ್ಪ ನೆಮ್ಮದಿಯಾಗಿದ್ದ ದರ್ಶನ್ ಗೆ ಈಗ ಮೂರು ಮೂರು‌ ಸಂಕಷ್ಟ ಎದರಾಗಿದ್ದೆ, ಎಲ್ಲಾ ಸವಾಲುಗಳನ್ನ ದರ್ಶನ್‌ ಹೇಗೆ ಪರಿಹರಿಸಿಕೊಳ್ಳಲಿದ್ದಾರೆ ಎಂಬುದೇ ದೊಡ್ಡ ಕುತೂಹಲವಾಗಿದೆ.