ತಂತ್ರಜ್ಞಾನ

ಏರ್​ಟೆಲ್, ಜಿಯೋ ರಿಚಾರ್ಜ್​ ಮಾಡಿಸಿ ಸುಸ್ತಾಗಿದ್ದೀರಾ? don't worry.. BSNL ಹೊತ್ತು ತಂದಿದೆ ಮೆಗಾ ಆಫರ್..!

ಅನಿಯಮಿತ ಕರೆ, ಡೇಟಾ ಸೇರಿ ಸಾಲುಸಾಲು ಆಫರ್ ನೀಡುತ್ತಿದೆ. ಸರ್ಕಾರಿ ಏಕಸ್ವಾಮ್ಯದ BSNL 160 ದಿನಗಳ ವ್ಯಾಲಿಡಿಟಿ ಪ್ಲಾನ್ ಪರಿಚಯಿಸಿದ್ದು, ಗ್ರಾಹಕರ ಮನಗೆದ್ದಿದೆ.

ಏರ್ಟೆಲ್, ಜಿಯೋ ರಿಚಾರ್ಜ್ ಮಾಡಿಸಿ ಬೇಸತ್ತಿರುವ ಬಳಕೆದಾರರಿಗಾಗಿ, ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ಅತ್ಯಾಕರ್ಷಕ ಆಫರ್ ನೀಡುತ್ತಿದೆ. BSNL ತನ್ನ ಬಳಕೆದಾರರಿಗಾಗಿ ಬಜೆಟ್ ಫ್ರೆಂಡ್ಲಿ ಯೋಜನೆಯನ್ನ ರೂಪಿಸುತ್ತಿದೆ.

ಹೌದು, ಅನಿಯಮಿತ ಕರೆ, ಡೇಟಾ ಸೇರಿ ಸಾಲುಸಾಲು ಆಫರ್ ನೀಡುತ್ತಿದೆ. ಸರ್ಕಾರಿ ಏಕಸ್ವಾಮ್ಯದ BSNL 160 ದಿನಗಳ ವ್ಯಾಲಿಡಿಟಿ ಪ್ಲಾನ್ ಪರಿಚಯಿಸಿದ್ದು, ಗ್ರಾಹಕರ ಮನಗೆದ್ದಿದೆ. BSNL ಪ್ರಿಪೇಯ್ಡ್ ಬಳಕೆದಾರರು 160 ದಿನಗಳ ಸಿಂಧ್ವುತ್ವ ಪಡೆಯಬೇಕಾದರೆ  997 ರೂಪಾಯಿಯ ರೀಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬೇಕು. ಇದೊಂದು ಧೀರ್ಘಾವದಿಯ ಪ್ಲಾನ್ ಆಗಿದ್ದು, ಗ್ರಾಹಕರಿಗಾಗಿ ಹಲವು ಉಪಯೋಗಗಳನ್ನ ಒದಗಿಸುತ್ತದೆ.

 ಈ ಪ್ಲಾನ್ ಪಡೆದ ಬಳಕೆದಾರರು ದೇಶದ ಯಾವುದೇ ನೆಟ್ವರ್ಕ್ಗಳಿಗೆ ಅನಿಯಮಿತ ಕರೆ ಮಾಡಬಹುದು. ಅಷ್ಟೇ ಅಲ್ಲದೇ ಪ್ರತಿದಿನ 2ಜಿಬಿ ಡೇಟಾದಂತೆ 160 ದಿನಗಳಿಗೆ ಸರಿಯಾಗಿ 320ಜಿಬಿ ಹೈ-ಸ್ಪೀಡ್ ಡೇಟಾ ನೀಡುತ್ತದೆ. ಹಾಗೂ ದಿನಕ್ಕೆ 100 SMS ಉಚಿತವಾಗಿದ್ದು, ನ್ಯಾಷನಲ್ ರೋಮಿಂಗ್ ಆಯ್ಕೆ ಕೂಡ ಇದರಲ್ಲಿದೆ. 

ಮುಖ್ಯವಾಗಿ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ BSNL ಟ್ಯೂನ್ ಮತ್ತು ಝಿಂಗ್ ಮ್ಯೂಸಿಕ್ ಅಳವಡಿಸಿಕೊಂಡು ಆನಂದಿಸಬಹುದಾಗಿದೆ. ಈ ಯೋಜನೆಗಾಗಿ ನೀವು ನಿಮ್ಮ ಹತ್ತಿರದ ರಿಟೇಲ್ ಸ್ಟೋರ್, BSNL ವೆಬ್ಸೈಟ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದು.