ಕರ್ನಾಟಕ

ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪಷಲ್‌ ಗಿಫ್ಟ್‌ ಕೊಟ್ಟ ಶ್ರೀಮತಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌..

ದಿವಂಗತ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಅಪ್ಪು ಸಿನಿಮಾ ಮಾರ್ಚ್‌17ಕ್ಕೆ ರೀ ರಿಲೀಸ್‌..

ಸ್ನೇಹಿತರೇ ಮುಂದಿನ ತಿಂಗಳು ಅಂದ್ರೆ ಮಾರ್ಚ್‌17ನೇ ತಾರೀಖು ದಿವಂಗತ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ರವರ 50ನೇ ಹುಟ್ಟು ಹಬ್ಬದ ಸಂಭ್ರಮ, ಇದೇ ವೇಳೆ ಅವರ ಅಭಿಮಾನಿಗಳಿಗೆ ಪವರ್‌ಸ್ಟಾರ್‌ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಭರ್ಜರಿ ಅನೌನ್ಸ್‌ಮೆಂಟ್‌ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಹೌದು ಕಳೆದ ವರ್ಷ ಪುನೀತ್‌ 49ನೇ ಹುಟ್ಟು ಹಬ್ಬಕ್ಕೆ, ಸೂರಿ ನಿರ್ದೇಶನದ ಪುನೀತ್‌ ನಟನೆಯ ಬ್ಲಾಕ್‌ಬಸ್ಟರ್‌ ಸಿನಿಮಾ ಜಾಕಿ ರೀ ರಿಲೀಸ್‌ ಮಾಡುವ ಮುಖಾಂತರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ರು, ಅದೇ ರೀತಿ ಈ ಬಾರಿ ದಿವಂಗತ ಪುನೀತ್‌ ರಾಜ್‌ಕುಮಾರ್‌ ರವರ 50ನೇ ಹುಟ್ಟು ಹಬ್ಬಕ್ಕೆ, ಪುನೀತ್‌ ರಾಜ್‌ಕುಮಾರ್‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೊಟ್ಟ ಮೊದಲ ಚಿತ್ರ, ಅಪ್ಪು ರೀ ರಿಲೀಸ್‌ ಮಾಡುವ ಮುಖಾಂತರ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡೋದಕ್ಕೆ ಸಿದ್ಧರಾಗಿದ್ದಾರೆ..