ಒಂದು ಕಾಲ ಇತ್ತು, ರಣವೀರ್‌ಸಿಂಗ್‌ನ ಬಾಲಿವುಡ್‌ನ VERSATILE ACTOR ಅಂತಾ ಕರೀತಿದ್ರು, ಅದು ಯಾವುದೇ ಆಗಿರಲಿ, ಗಂಭೀರವಾದ ಪಾತ್ರವಾಗಿರಲಿ, ಹಾಸ್ಯಮಯ ಸನ್ನಿವೇಶವಾಗಿರಲಿ, ಅಥವಾ ರೋಮ್ಯಾಂಟಿಕ್‌ರೋಲ್‌ಆಗಿರಲಿ, ಜಲಾಲುದ್ದೀನಿ ಖಿಲ್ಜಿಯಿಂದ ಹಿಡಿದು, ಸೂಪರ್‌ಕಾಪ್‌ಪಾತ್ರವಾಗಿರಲಿ, ರಣವೀರ್‌ಎಲ್ಲಾ ಪಾತ್ರಗಳಿಗೂ ಸೂಟ್ ಆಗ್ತಿದ್ರು..

ಬಾಲಿವುಡ್‌ಮಂದಿ ಮುಂದಿನ ಸೂಪರ್‌ಸ್ಟಾರ್ ರಣವೀರ್‌ಅಂತಾ ಹೇಳ್ತಾ ಇದ್ರು, ಆದ್ರೆ ಈಗ ಇದೇ ರಣವೀರ್‌ಸಿಂಗ್‌ಸಿನಿಮಾಗಳು ಯಾವಾಗ ತೆರೆ ಮೇಲೆ ಬರ್ತೀದೆ..? ಯಾವಾಗ ಹೇಳ ಹೆಸರಿಲ್ಲದಂತೆ ಹೋಗ್ತಿದೆ ಅನ್ನೋದು ಗೊತ್ತೇ ಆಗ್ತಿಲ್ಲ, ಬಾಕ್ಸ್‌ಆಫೀಸ್‌ಗೆಲ್ಲೋದ್ರಲ್ಲಿ ರಣವೀರ್‌ನಿರಂತರವಾಗಿ ಸೋಲುತ್ತಲೇ ಬರ್ತಿದ್ದಾರೆ, 83 ನಂಥಾ ಅಧ್ಭುತ ಚಿತ್ರವಾಗಿರಲಿ, ಜಯೇಶ್‌ಭಾಯ್‌ಜೋರ್‌ದಾರ್‌ಚಿತ್ರವಾಗಿರಲಿ ಅಥವಾ ಸರ್ಕಸ್‌ನಂಥಾ ಎಂಟರ್‌ಟೈನ್ಮೆಂಟ್‌ಚಿತ್ರವಾಗಿರಲಿ, ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಲೇ ಇಲ್ಲ, ಕಲೆಕ್ಷನ್‌ನೋಡಿದ್ರೆ ಅಷ್ಟಕಷ್ಟೇ ಇದರಿಂದ ರಣವೀರ್‌ಸಿಂಗ್‌ಗಾಗಿ ಮೀಸಲಿಟ್ಟ ಕಥೆಗಳೆಲ್ಲಾ ಕ್ಯಾನ್ಸಲ್‌ಆಗ್ತಿವೆ, ಅದಕ್ಕೆ ಕಾರಣ ಪ್ರಡ್ಯೂಸರ್‌ಗಳು ಹಿಂದೇಟು ಹಾಕ್ತಿರೋದು..

ಹೌದು ರಣವೀರ್‌ನ ಫೇವರೇಟ್‌ಡೈರೆಕ್ಟರ್‌ಸಂಜಯ್‌ಲೀಲಾ ಬನ್ಸಾಲಿಯ ಕಲಾತ್ಮಕ ಚಿತ್ರ ಬೈಜು ಬಾವರ ಆಗಿರಲಿ, ಡೈರೆಕ್ಟರ್‌ಕರಣ್‌ಜೋವರ್‌ನಿರ್ದೇಶನದ ಮಲ್ಟಿ ಸ್ಟಾರ್‌ಸಿನಿಮಾ ತಕ್ಥ್‌ನಿಂದ ಕೂಡಾ ರಣವೀರ್‌ಹೊರಬಂದಿದ್ದಾರೆ, ಇದರ ಜೊತೆಗೆ ರಣವೀರ್‌ಸಿಂಗ್‌ನ ಡ್ರೀಮ್‌ಪ್ರಾಜೆಕ್ಟ್‌ಶಕ್ತಿಮಾನ ಕೂಡಾ ಸೆಟ್ಟೆರೋದಕ್ಕೂ ಮುನ್ನ ಕ್ಯಾನ್ಸಲ್‌ಆಗಿದೆ, ಇದಾದ್ಮೇಲೆ ಪ್ರಶಾಂತ್‌ವರ್ಮಾ ಅನ್ನೋ ನಿರ್ದೇಶಕನ ಜೊತೆ ರಾಕ್ಷಕ್‌ಅನ್ನೋ ಸಿನಿಮಾವನ್ನ ರಣವೀರ್‌ಮಾಡ್ಬೇಕಿತ್ತು, ಆದ್ರೆ ಅದೂ ಕೂಡಾ ಈಗ ಕ್ಯಾನ್ಸಲ್‌ಆಗಿದೆ..
ಸ್ನೇಹಿತರೇ ಹಾಗಾದ್ರೆ ಅಂಥದ್ದು ಏನಾಯ್ತು ರಣವೀರ್‌ಸಿಂಗ್‌ರಂತಾ ನಟನಿಗೆ..? ಬಾಲಿವುಡ್‌ಮಂದಿ ರಣವೀರ್‌ನ ನಿರಾಕರಿಸುತ್ತಿರೋದು ಯಾಕೆ..? ಮುಂದಿನ ಸೂಪರ್‌ಸ್ಟಾರ್‌ಅಂತಾ ಹೇಳ್ತಿದ್ದವರು ಈಗ ರಣವೀರ್‌ಸಿಂಗ್‌ರನ್ನ ಕಡೆಗಾಣಿಸುತ್ತಿರೋದಾದ್ರೂ ಯಾಕೆ..? ಕೊಟ್ಟ ಪ್ರತಿಯೊಂದು ಪಾತ್ರಕ್ಕೂ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದ ರಣವೀರ್‌ಸಿಂಗ್‌ಗೆ ಈಗ ಪಾತ್ರಗಳೇ ಸಿಗ್ತಿಲ್ಲ ಅಂದ್ರೆ ಏನರ್ಥ..? ಏನಿದು ರಣವೀರ್‌ಸಿಂಗ್rise and downfall..

ರಣವೀರ್‌ಸಿಂಗ್‌ಗೆ ಡೌನ್‌ಫಾಲ್‌ಯಾಕಾಯ್ತು..? ಅಂತಾ ತಿಳಿಬೇಕು ಅಂದ್ರೆ ನಾವು ಸ್ವಲ್ಪ ಅವರ ಹಿಂದಿನ ಸ್ಟೋರಿಯನ್ನ ತಿಳಿಯಲೇಬೇಕು ಯಾಕಂದ್ರೆ ರಣವೀರ್‌ಸಿಂಗ್‌ಡೌನ್‌ಫಾಲ್‌ಅವರ ಜೀವನದ ಸುತ್ತವೇ ಸುತ್ತುತಿದೆ..

ರಣವೀರ್‌ಸಿಂಗ್‌ನ ಕೆಲವರು out sider ಅಂತಾ ಕರೀತಾರೆ, ಆದ್ರೆ ವಾಸ್ತವ ಏನು ಅಂದ್ರೆ ರಣವೀರ್‌ಸಿಂಗ್is not a typical outsider, ರಣವೀರ್‌ಸಿಂಗ್‌ಅವರ ಪೂರ್ಣ ಹೆಸರು ರಣವೀರ್‌ಸಿಂಗ್‌ಭವ್‌ನಾನಿ, ಇವರು ಪ್ರತಿಷ್ಟಿತ ಉದ್ಯಮಿಯೊಬ್ಬರ ಮಗ, ಇವರು ಅದೆಷ್ಟು ಶ್ರೀಮಂತರು ಅಂದ್ರೆ ರಣವೀರ್‌ಸಿಂಗ್‌ಕಾಲೇಜಿನಲ್ಲಿದ್ದಾಗ ಅಹಾನ ಡಿಯೋಲ್‌ಇವರ ಗರ್ಲ್‌ಫ್ರೆಂಡ್‌ಆಗಿದ್ರು, ಈ ಅಹಾನ ಡಿಯೋಲ್‌ಯಾರು ಅಂದ್ರೆ ಧರ್ಮೇಂದರ್‌ಹಾಗೂ ಹೇಮಾಮಾಲಿನಿ ದಂಪತಿಗಳ ಮಗಳು, ಇದಿಷ್ಟೇ ಅಲ್ಲ ರಣವೀರ್‌ಸಿಂಗ್‌ತಾಯಿ ಸೋನಂ ಕಪೂರ್‌ತಾಯಿಯ ಸಂಬಂಧಿಯೂ ಹೌದು, ನಾನು ರಣವೀರ್‌ಸಿಂಗ್‌ಬಾಲಿವುಡ್‌ನ ರಿಲೇಷನ್‌ಶಿಪ್‌ಬಗ್ಗೆ ಹೇಳ್ತಾ ಇದ್ದೀನಿ ಅಂದ್ರೆ ರಣವೀರ್‌ಸಿಂಗ್‌ಉತ್ತಮ ಕಲಾವಿದ ಅಲ್ಲ ಅಂತಲ್ಲ, ನಾನು ಹೇಳೋಕೆ ಹೊರಟಿರೋದು ಏನು ಅಂದ್ರೆ ರಣವೀರ್‌ಸಿಂಗ್‌ಪ್ರತಿಷ್ಟಿತ ಉದ್ಯಮಿಯ ಮಗನೇ ಆದ್ರೂ ಕೂಡಾ ಅದ್ಯಾವುದನ್ನು ಮೈಗೆ ಅಂಟಿಸಿಕೊಳ್ಳದೆ, ಕಾಲೇಜಿನ ದಿನಗಳಿಂದಲೇ ತುಂಬಾನೇ ಹಾರ್ಡ್‌ವರ್ಕ್‌ಮಾಡೋರು, ಕಾಲೇಜಿನ ದಿನಗಳಲ್ಲೇ ಕಾಪಿ ರೈಟಿಂಗ್‌ಕೆಲಸ ಕೂಡಾ ಮಾಡ್ತಿದ್ರು, ಇದರ ಜೊತೆಗೆ ಪ್ರತೀ ದಿನ 5 ಗಂಟೆಗಳ ಕಾಲ ನಟನೆಯ ಅಭ್ಯಾಸ ಕೂಡಾ ಮಾಡ್ತಿದ್ರು..ಇದೇ ಕಾರಣಕ್ಕೆ ಇರಬಹುದು ರಣವೀರ್‌ಉತ್ತಮ ನಟನಾಗೋದಕ್ಕೆ ಸಾಧ್ಯವಾಗಿದ್ದು..

ಒಂದಲ್ಲಾ ಎರಡಲ್ಲಾ 5 ವರ್ಷಗಳ ಕಾಲ ಹಾರ್ಡ್‌ವರ್ಕ್‌ಮಾಡಿದ ರಣವೀರ್‌ಸಿಂಗ್‌ನೋಡಿ ಆಧಿತ್ಯಾ ಛೋಪ್ರಾ ತಮ್ಮ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಕೊಡ್ತಾರೆ, ಆ ಸಿನಿಮಾ ಯಾವುದು ಅಂದ್ರೆ ಅದುವೇ ಬ್ಯಾಂಡ್‌ಬಾಜಾ ಬಾರಾತ್‌ಈ ಸಿನಿಮಾದಲ್ಲಿ ಅನುಷ್ಕಾ ಶರ್ಮ ಜೊತೆ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡ್ರು, ನೀವು ಅದೇನೇ ಹೇಳಿ ಯಾವುದೇ ಒಬ್ಬ ಹೊಸ ಪ್ರತಿಭೆ ನಾಯಕ ನಟನಾಗಿ ಕಾಣಿಸಿಕೊಂಡ್ರೆ ಮೊದಲಿಗೆ ಟೀಕೆ ಬರೋದು ಸಹಜ, ಅಷ್ಟೇ ಯಾಕೆ ಖುದ್ದು ಬ್ಯಾಂಡ್‌ಬಾಜಾ ಬಾರತ್‌ಸಿನಿಮಾದ ನಿರ್ದೇಶಕ ಮನೀಶ್‌ಶರ್ಮಾ ಕೂಡಾ ಶಾಕ್‌ಗೆ ಒಳಗಾಗಿದ್ರು, ನಿರ್ಮಾಪಕ ಆಧಿತ್ಯ ಛೋಪ್ರಾ ಇಂಥಾ ನಿರ್ಧಾರವನ್ನ ಯಾಕೆ ತೊಗೊಂಡ್ರು ಅಂತಾ..ಇಲ್ಲಿ ನಿರ್ಮಾಪಕ ಆಧಿತ್ಯಾ ಛೋಪ್ರಾ ಉದ್ದೇಶ ಇಷ್ಟೇ ಏನು ಅಂದ್ರೆ ಈ ಮನುಷ್ಯನಲ್ಲಿ ನಟನೆಯ ಕೌಶಲ್ಯ ಇದೆ, ಅದಕ್ಕಾಗಿ ನಾನು ಚಾನ್ಸ್‌ಕೊಡ್ತಿದ್ದೀನಿ ಅನ್ನೋದು, ಇಷ್ಟೆಲ್ಲಾ ಒಂದು ಕಡೆ ನಡೀತಿದ್ರೆ ಖ್ಯಾತ ನಿರ್ದೇಶಕ ಕರಣ್‌ಜೋಹರ್‌ಕೂಡಾ ಆಧಿತ್ಯ ಛೋಪ್ರಾಗೆ ನಿಮ್ಮ ಈ ನಿರ್ಧಾರ ತಪ್ಪು ಅಂತಾ ಹೇಳಿದ್ರಂತೆ..

ಯೆಸ್‌ಮೊದ ಮೊದಲು ರಣವೀರ್‌ಸಿಂಗ್‌ಒಬ್ಬ ಉತ್ತಮ ನಟನಾಗ್ತಾನೆ ಅಂತಾ ಯಾರೂ ಕೂಡಾ ನಂಬಿರಲಿಲ್ಲ, ಸಿಕ್ಕ ಮೊದಲ ಸಿನಿಮಾ ಬಗ್ಗೆ ಅದೆಷ್ಟು ಹೋಮ್ ವರ್ಕ್‌ಮಾಡಿದ್ರು ಅಂದ್ರೆ, ನಿರ್ದೇಶಕರು ನೀವು ಈ ಸಿನಿಮಾದಲ್ಲಿ ದಿಲ್ಲಿಯ ಸಾಮ್ಯಾನ್ಯ ಹುಡುಗನ ಕ್ಯಾರೆಕ್ಟರ್‌ಮಾಡ್ತಿದ್ದೀರಾ ಅಂತಾ ಹೇಳಿದ್ದಕ್ಕೆ ಖುದ್ದು ರಣವೀರ್, ಮುಂಬೈನಲ್ಲಿದ್ದ ತಮ್ಮ ಮನೆಯನ್ನ ಬಿಟ್ಟು ದಿಲ್ಲಿಗೆ ಶಿಫ್ಟ್‌ಆಗ್ತಾರೆ, ಯಾಕಂದ್ರೆ ದಿಲ್ಲಿಯಲ್ಲಿರೋ ಯುವಕರು ಹೇಗೆ ಮಾತನಾಡ್ತಾರೆ, ಅವರ ಆವ ಭಾವ ಹೇಗಿರುತ್ತೆ ಅನ್ನೋದನ್ನ ಪ್ರತ್ಯಕ್ಷವಾಗಿ ನೋಡಿ ಕಲಿಯೋದಕ್ಕೆ ಹೋಗಿದ್ರಂತೆ, ಇದೇ ಕಾರಣಕ್ಕೆ ನೋಡಿ ತಮ್ಮ ಮೊದಲ ಸಿನಿಮಾದಲ್ಲಿ ರಣವೀರ್‌ಸಿಂಗ್‌ಭರ್ಜರಿ ಓಪನಿಂಗ್‌ಪಡೆದಿದ್ರು, ಸಿನಿಮಾ ಬ್ಲಾಕ್‌ಬಸ್ಟರ್‌ಹಿಟ್‌ಸಿನಿಮಾ ಆಯ್ತು, 20 ಕೋಟಿಯ ಬ್ಯಾಂಡ್‌ಬಾಜಾ ಬಾರತ್‌ಸಿನಿಮಾ, ಬಾಕ್ಸ್‌ಆಫೀಸ್‌ನಲ್ಲಿ ಇದು 27 ಕೋಟಿ ರೂಪಾಯಿ ಗಳಿಸಿತ್ತು, ಇದರ ಜೊತೆಗೆ ಈ ಸಿನಿಮಾದ ಹಾಡುಗಳು ಕೂಡಾ ಸೂಪರ್‌ಹಿಟ್‌ಆಗಿತ್ತು, ಇದೇ ಕಾರಣಕ್ಕೆ ರಣವೀರ್‌ರಾತ್ರೋ ರಾತ್ರಿ ಸ್ಟಾರ್‌ಆಗಿ ಹೋಗ್ತಾರೆ..
ಮೊದಲ ಸಿನಿಮಾ ಹಿಟ್‌ಆದ್ಮೇಲೆ ರಣವೀರ್‌ಸಿಂಗ್‌ಗೆ ಲೂಟೇರ ಸಿನಿಮಾಗೆ ಆಫರ್‌ಬರುತ್ತೆ, ಈ ಸಿನಿಮಾದಲ್ಲಿ ರಣವೀರ್‌ಸಿಂಗ್‌ಗೆ ಸೀರಿಯಸ್‌ಪಾತ್ರ ಸಿಗುತ್ತೆ, ಈ ಸಿನಿಮಾದಲ್ಲಿ ರಣವೀರ್‌ಸಿಂಗ್‌ಹೇಗೆ ಪಾತ್ರ ನಿಭಾಯಿಸುತ್ತಾರೆ ಅನ್ನೋ ನಿರೀಕ್ಷೆ ಇತ್ತು, ಆದ್ರೆ ಸಿನಿಮಾ ಫ್ಲಾಪ್‌ಆಗುತ್ತೆ, ಮತ್ತೊಂದು ವಿಚಾರ ಏನಪ್ಪ ಅಂದ್ರೆ ರಣವೀರ್‌ಸಿಂಗ್‌ನಟನೆ ಎಷ್ಟು ಅಧ್ಬುತವಾಗಿತ್ತು ಅಂದ್ರೆ ಎಲ್ಲರು ರಣವೀರ್‌ನಟನೆಗೆ ಜೈ ಅಂದಿದ್ರು, ಈ ಸಿನಿಮಾದಲ್ಲಿ ರಣವೀರ್‌ನಟನೆ ನೋಡಿದ ಸಿನಿ ಪ್ರೇಕ್ಷಕ ಈ ನಟ ಒಂದೆರಡು ಸಿನಿಮಾ ಮಾಡಿ ಮನೆಗೆ ಹೋಗೋನಲ್ಲ, ಬಾಲಿವುಡ್‌ನಲ್ಲಿ ಬಹುಕಾಲ ಉಳಿಯೋ ನಟ ಅಂತಾ ಹೇಳಿದ್ರು..
ರಣವೀರ್‌ಸಿಂಗ್‌ಲೂಟೇರದಲ್ಲಿ ಮಾಡಿದ್ದ ಪಾತ್ರವನ್ನ ನೋಡಿ ಖ್ಯಾತ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ತಮ್ಮ ಅತ್ಯದ್ಭುತ ಪ್ರೇಮ ಕಾವ್ಯ ರಾಮ್‌ಲೀಲಾಗೆ ನಾಯಕನನ್ನಾಗಿ ಆಯ್ಕೆ ಮಾಡ್ತಾರೆ, ರಾಮಲೀಲಾ ಸಿನಿಮಾದಲ್ಲಿ ರಣವೀರ್‌ನಟನೆ ನೋಡಿದ ಪ್ರೇಕ್ಷಕ ಫಿದಾ ಆಗಿದ್ದ, ಇಲ್ಲಿಂದಲೇ ಸಂಜಯ್‌ಲೀಲಾ ಬನ್ಸಾಲಿ ದಿಲ್‌ಗೆದ್ದಿದ್ರು ರಣವೀರ್‌ಸಿಂಗ್, ಇದೇ ಕಾರಣಕ್ಕೆ ತಮ್ಮ ಮುಂದಿನ ಚಿತ್ರ ಬಾಜಿರಾವ್‌ಮಸ್ತಾನಿಯಲ್ಲಿ ಪೇಶ್ವ ಕ್ಯಾರೆಕ್ಟರ್‌ನ ರಣವೀರ್‌ಬಿಟ್ಟು ಬೇರೆ ಯಾರೂ ಮಾಡೋದಕ್ಕೆ ಸಾಧ್ಯವಿಲ್ಲ ಅಂತಾ ನಿರ್ಧಾರ ಮಾಡಿದ್ರು..
ಬಾಜಿರಾವ್‌ಮಸ್ತಾನಿ ಸಿನಿಮಾದಲ್ಲಿ ರಣವೀರ್‌ಸಿಂಗ್‌ಯಾವ ಮಟ್ಟಿಗೆ ಪರಕಾಯ ಪ್ರವೇಶ ಮಾಡಿದ್ರು ಅಂದ್ರೆ, ಅವರ ಬ್ರ್ಯಾಂಡ್‌ವ್ಯಾಲ್ಯೂ ಇದರಿಂದ ಮತ್ತಷ್ಟು ಹೆಚ್ಚಾಗಿತ್ತು, ಇದಾದ್ಮೇಲೆ ರಣವೀರ್‌ಸಿಂಗ್‌ಗೆ ಗುಂಡೇ ಅನ್ನೋ ಸಿನಿಮಾ ಸಿಗುತ್ತೆ, ಸಾಲು ಸಾಲು ಸಿನಿಮಾಗಳು ರಣವೀರ್‌ಸಿಂಗ್‌ಗೆ ಸಿಗ್ತಾ ಹೋದಂತೆ ಸೂಪರ್‌ಸ್ಟಾರ್‌ಆಗ್ತಾರೆ ರಣವೀರ್‌ಸಿಂಗ್, ಅದ್ಯಾವುದೇ ಕ್ಯಾರೆಕ್ಟರ್‌ಕೊಟ್ರು ಅದಕ್ಕೆ ರಣವೀರ್‌ಸಿಂಗ್‌ಜೀವ ತುಂಬ್ತಾರೆ ಅನ್ನೋದು ಬಾಲಿವುಡ್‌ಮಂದಿಗೆ ತಿಳಿದುಹೋಗುತ್ತೆ, ಇಷ್ಟೆಲ್ಲಾ ಸಿನಿಮಾಗಳು ಆದ್ಮೇಲೆ ರಣವೀರ್‌ಸಿಂಗ್‌ಸಿನಿ ಜರ್ನಿ ಪೀಕ್‌ನಲ್ಲಿದ್ದಾಗ ತೆರೆ ಮೇಲೆ ಬಂದಿದ್ದೆ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್‌ಸಿನಿಮಾ..
ಯೆಸ್‌ಯಾವಾಗ ಪದ್ಮಾವತ್‌ಚಿತ್ರ ರಿಲೀಸ್‌ಆಗತ್ತೋ ಈ ಚಿತ್ರದಲ್ಲಿ ರಣವೀರ್‌ಸಿಂಗ್‌ನಟನೆ ನೋಡಿ ಸಿನಿ ಪ್ರೇಕ್ಷಕ ಫಿದಾ ಆಗಿದ್ದ, ಈ ಸಿನಿಮಾದಲ್ಲಿ ಸೂಪರ್‌ಸ್ಟಾರ್‌ಶಾಹಿದ್‌ಕಪೂರ್‌ಇದ್ರೂ ಕೂಡಾ ಎಲ್ಲರ ಕಣ್ಣು ರಣವೀರ್‌ಸಿಂಗ್‌ಮೇಲೆ ಇತ್ತು, ಅಷ್ಟರ ಮಟ್ಟಿಗೆ ರಣವೀರ್‌ಸಿಂಗ್‌ಪದ್ಮಾವತ್‌ನಲ್ಲಿ ಮಿಂಚಿದ್ರು. ಪದ್ಮಾವತ್‌ನಲ್ಲಿ ವಿಲನ್‌ಆಗಿ ಕಾಣಿಸಿಕೊಂಡಿದ್ದ ರಣವೀರ್‌ಮುಂದೆ ಗಲ್ಲಿ ಬಾಯ್‌ಅನ್ನೋ ಚಿತ್ರದಲ್ಲಿ ನಟಿಸ್ತಾರೆ, ಈ ಸಿನಿಮಾದಲ್ಲಿ ರಣವೀರ್‌ರ್ಯಾಪರ್‌ರೂಲ್‌ಮಾಡ್ಬೇಕಿತ್ತು, ಈ ಟೈಂಗಾಗಲೇ ರಣವೀರ್‌ಸೂಪರ್‌ಸ್ಟಾರ್‌ಆಗಿದ್ರು, ಆದ್ರೆ ಸೂಪರ್‌ಸ್ಟಾರ್‌ಅನ್ನೋ ಪಟ್ಟವನ್ನ ತಲೆಗೆ ಏರಿಸಿಕೊಳ್ಳದ ರಣವೀರ್, ಈ ಸಿನಿಮಾದ ಪಾತ್ರಕ್ಕಾಗಿ ಪ್ರತೀ ದಿನ ಹಿಪ್‌ಹಾಪ್‌ಸಾಂಗ್‌ಗಳನ್ನ ಕೇಳುತ್ತಿದ್ರಂತೆ, ಬರೀ ಕೇಳೋದು ಮಾತ್ರವಲ್ಲ ಮುಂಬೈನ ಗಲ್ಲಿಗಳಲ್ಲಿ ಹಿಪ್‌ಹಾಪ್‌ಕಲಾವಿದರನ್ನ ಭೇಟಿ ಮಾಡಿ ಅವರಿಂದ ಸಾಕಷ್ಟು ಟಿಪ್ಸ್‌ಗಳನ್ನ ಸಿನಿಮಾಗಾಗಿ ಕಲಿತಿದ್ರಂತೆ, ಇಷ್ಟೊಂದು ಡೆಡಿಕೇಷನ್‌ಇದ್ದ ಮೇಲೆ ಸಿನಿಮಾ ಹೇಗಿರುತ್ತೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ, ಬಾಕ್ಸ್‌ಆಫೀಸ್‌ಧೂಳ್‌ಎಬ್ಬಿಸಿತ್ತು ಗಲ್ಲಿ ಬಾಯ್‌ಚಿತ್ರ, ಈ ಚಿತ್ರದ ನಟನೆಗಾಗಿ ರಣವೀರ್‌ಗೆ ನ್ಯಾಷಿನಲ್‌ಅವಾರ್ಡ್‌ಸಿಗುತ್ತೆ, ಇದಾದ್ಮೇಲೆ ರಣವೀರ್‌ಸ್ಟಾರ್‌ಡಮ್‌ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೆ, ಅದೆಷ್ಟರ ಮಟ್ಟಿಗೆ ಅಂದ್ರೆ ಬಾಲಿವುಡ್‌ಬಾದ್‌ಶಾ ಶಾರುಖ್‌ರನ್ನೂ ಮೀರಿಸೋ ಹಾಗೆ ರಣವೀರ್‌ಗೆ ಆಡ್‌ಗಳು ಸಿಗುತ್ತವೇ ಅಂದ್ರೆ ಯೋಚನೆ ಮಾಡಿ, ರಣವೀರ್‌ಅದೆಷ್ಟರ ಮಟ್ಟಿಗೆ ಸ್ಟಾರ್‌ಡಮ್ ಕ್ರಿಯೆಟ್‌ಮಾಡಿದ್ರು ಅಂತಾ..
ಈಗ ನಾವು ರಣವೀರ್‌ಸಿಂಗ್‌ರೈಸ್‌ನೋಡಿದ್ವಿ, ಆದ್ರೆ ಈಗ ನಾವು ರಣವೀರ್‌ಸಿಂಗ್‌ಡೌನ್‌ಫಾಲ್‌ಬಗ್ಗೆ ಹೇಳ್ತೀವಿ ಕೇಳಿ, ಯೆಸ್‌ಮೊದಲನೇದಾಗಿ ರಣವೀರ್‌ಸಿಂಗ್‌ಡೌನ್‌ಫಾಲ್‌ಗೆ ಪ್ರಮುಖ ಕಾರಣ OVER EXPOSURE..
ಒಬ್ಬ ಸೂಪರ್‌ಸ್ಟಾರ್‌ಆದವನು ಸಾಮಾನ್ಯ ಪ್ರೇಕ್ಷಕನಿಗೆ ಎಲ್ಲಾ ಕಡೆ ಸಿಗೋದಿಲ್ಲ, ಇದರಿಂದ ಜನ ಅವನನ್ನ ಸಿನಿಮಾದಲ್ಲಿ ನೋಡಿ ಕಣ್ತುಂಬಿಕೊಳ್ತಾರೆ, ಆದ್ರೆ ಇಲ್ಲಿ ರಣವೀರ್‌ಸಿಂಗ್‌ಆ ಕೆಲಸ ಮಾಡಲಿಲ್ಲ, ಸಿಕ್ಕ ಸಿಕ್ಕ ಆಡ್‌ಗಳಲ್ಲಿ ಆಕ್ಟ್‌ಮಾಡ್ತಾರೆ, ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಕಾಣಿಸಿಕೊಳ್ತಾರೆ ಇದು ಅವರ ತಪ್ಪು ಅಂತ ಹೇಳೋದಿಲ್ಲ, ಅವರ ಪಿಆರ್‌ಗಳ ತಪ್ಪು, ಮತ್ತೊಂದು ವಿಚಾರ ನಿಮಗೆ ಹೇಳಲೇಬೇಕು ಅದೇನು ಅಂದ್ರೆ ರಣವೀರ್‌ಸಿಂಗ್‌ಹಾಕೋ ಬಟ್ಟೆ, ಮೊದ ಮೊದಲು ರಣವೀರ್‌ಸಿಂಗ್‌ಬಟ್ಟೆ ಏನೋ ವಿಶೇಷವಾಗಿದೆ ಅಂತಾ ಅನ್ನಿಸ್ತಾ ಇತ್ತು, ಆದ್ರೆ ಬರ್ತಾ ಬರ್ತಾ ನೋಡೋರಿಗೆ ಅಸಹ್ಯ ಹುಟ್ಟಿಸೋ ರೀತಿ ಇರ್ತಾ ಇತ್ತು, ಈಗ ನೀವೇನು ಉರ್ಫಿ ಜಾವಿದ್‌ಕಾಸ್ಟ್ಯೂಮ್‌ಗಳನ್ನ ನೋಡ್ತೀರಲ್ಲ ಹಾಗೆ, ಮೊದ ಮೊದಲು ಉರ್ಫಿ ಜಾವಿದ್‌ಹಾಕ್ತಿದ್ದ ವಿಶೇಷವಾದ ಬಟ್ಟೆಗಳನ್ನ ಪ್ರೇಕ್ಷಕರು ನೋಡಿ ಇಷ್ಟ ಪಡ್ತಿದ್ರು ಆದ್ರೆ ಬರ್ತಾ ಬರ್ತಾ ಅದು ಅತಿಯಾಗಿ, ಸೋಷಿಯಲ್‌ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಆಹಾರವಾದ್ರು ಈ ಮಾಡಲ್, ಅದೇ ರೀತಿ ರಣವೀರ್‌ಕೂಡಾ ಜನರ ಹತ್ತಿರ ಮತ್ತು ಸೆಲಬ್ರಿಟಿಗಳ ಹತ್ತಿರ ಮಾತನಾಡುವ ರೀತಿ, ವಿಚಿತ್ರ ಬಟ್ಟೆಗಳನ್ನ ಹಾಕಿಕೊಳ್ಳುವ ರೀತಿ ನೋಡಿ ಅವರ ಅಭಿಮಾನಿಗಳು ಬೇಸತ್ತಿದ್ರು, ಇದೆಲ್ಲಾ ಕಾರಣಗಳಿಂದ ಎಲ್ಲೋ ಒಂದು ಕಡೆ ರಣವೀರ್‌ಸಿನಿಮಾಗಳು ಚನ್ನಾಗಿದ್ರೂ ಪ್ರೇಕ್ಷಕರು ಸಿನಿಮಾ ನೋಡೋದಕ್ಕೆ ಥಿಯೇಟರ್‌ಗೆ ಬರ್ತೀಲ್ಲ, ಹಾಗಂದ ಮಾತ್ರಕ್ಕೆ ರಣವೀರ್‌ಸಿನಿ ಕೆರಿಯರ್‌ಇಲ್ಲಿಗೆ ಮುಗಿದೋಯ್ತಾ..? ಇಲ್ಲ ಖಂಡಿತ ಇಲ್ಲ, ಡೌನ್‌ಫಾಲ್‌ಯಾರಿಗೆ ಆಗಿಲ್ಲ, ಬಾಲಿವುಡ್‌ಬಾದ್‌ಶಾ ಅಂತಾ ಕರಿಸಿಕೊಳ್ಳೋ ಶಾರುಖ್‌ಖಾನ್‌ಗೆ ಆಗಿಲ್ವಾ,ಈ ಹಿಂದೆ ಅವರ ಸಾಲು ಸಾಲು ಸಿನಿಮಾಗಳು ಸೋತಿಲ್ವಾ, ಆದ್ರೆ ಸಾಲು ಸಾಲು ಸಿನಿಮಾಗಳು ಸೋತರು, ಒಂದೇ ಸಿನಿಮಾದಲ್ಲಿ ಕಂಬ್ಯಾಕ್‌ಮಾಡೋ ತಾಕತ್ತು ಶಾರುಖ್‌ಗೆ ಇದೆ, ಇದೇ ರೀತಿ ರಣವೀರ್‌ಗೆ ಈಗ ಬ್ಯಾಡ್‌ಟೈಂ ಇರಬಹುದು, ಆದ್ರೆ ಮುಂದೆ ಅವರ ನಟನಾ ಕೌಶಲ್ಯ ಅವರ ಕೈಬಿಡೋದಿಲ್ಲ ಅನ್ನೋದು ನಮ್ಮ ನಂಬಿಕೆ..