ಬೆಂಗಳೂರಿನ : ಆಹಾರ ಪ್ರಿಯರಿಗೆ ಆರೋಗ್ಯ ಇಲಾಖೆ ಶಾಕಿಂಗ್ ಸುದ್ದಿ ನೀಡಿದೆ. ಇತ್ತೀಚೆಗೆ ತರಾಕಾರಿ, ಕಾಳುಗಳಲ್ಲಿಯೂ ಅನಾರೋಗ್ಯಕಾರಕ ಅಂಶಗಳು ಪತ್ತೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೌದು ಮೊನ್ನೆಯಷ್ಟೇ ಇಡ್ಲಿ ಅಸುರಕ್ಷಿತ ಎಂದು ವರದಿ ನೀಡಿದ್ದ ಆರೋಗ್ಯ ಇಲಾಖೆ ಬಟಾಣಿಯೂ ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಬೆಂಗಳೂರಿನ ವಿವಿಧ ಭಾಗದಲ್ಲಿನ ಸುಮಾರು 36 ಮಾದರಿಯ ಹಸಿರು ಬಟಾಣಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಪ್ರಯೋಗಾಲಯದ ವರದಿಯ ಪ್ರಕಾರ 36ರಲ್ಲಿ 28ಕ್ಕೂ ಹೆಚ್ಚು ಬಟಾಣಿ ಮಾದರಿಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಶಾಕಿಂಗ್ ವಿಚಾರವನ್ನ ಬೆಳಕಿಗೆ ತಂದಿದೆ.
ಬಟಾಣಿಗಳು ಹಚ್ಚ-ಹಸಿರಾಗಿ ಕಾಣಲು ಕೃತಕ ಬಣ್ಣವನ್ನ ಬಳಸಲಾಗುತ್ತಿದ್ದು, ಇದರಿಂದ ಜಹಜ ಬಟಾಣಿಗಿಂತ, ಬಣ್ಣ ಮಿಶ್ರಿತ ಬಟಾಣಿ ಅತ್ಯಂತ ಹಸಿರಾಗಿ ಕಾಣುತ್ತ ಜನರನ್ನ ಆಕರ್ಶಿಸುತ್ತದೆ. ಈ ಕೃತಕ ಬಣ್ಣ ಮಿಶ್ರಿತ ಬಟಾಣಿಯನ್ನ ತಿನ್ನುವುದಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಪ್ರಯೋಗಾಲಯದ ವರದಿಯ ಬೆನ್ನಲ್ಲೆ ಎಚ್ಚೆತ್ತಿರುವ ಆರೋಗ್ಯ ಮತ್ತು ಆಹಾರ ಸುರಕ್ಷತ ಇಲಾಖೆ ಕೃತಕ ಬಣ್ಣ ಬಳಸಿ ಬಟಾಣಿ ಮಾರಟ ಮಾಡುವ ವ್ಯಾಪರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.