ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಸಂಬಂಧ ಪೊಲೀಸರ ತನಿಖೆ ಚುರುಕುಗೊಂಡಿದೆ. ತನಿಖೆ ವೇಳೆ ಪೊಲೀಸರೇ ಶಾಕ್ ಆಗುವಂಥ ಮಾಹಿತಿಯೊಂದು ತಿಳಿದು ಬಂದಿದೆ. ಘಟನೆಯ ಹಿಂದಿನ ಕಾರಣ ವಕ್ಫ್ ಆಗಲಿ, ಹಿಂದೂ-ಮುಸ್ಲಿಂರ ವಿವಾದವಾಗಲಿ ಅಲ್ಲ. ಬದಲಾಗಿ ಒಂದು ವಿಕೃತ ಕಥೆಯೇ ಇದೆ ಎನ್ನಲಾಗಿದೆ. ಅದೇನಂದ್ರೆ ಈತ ಪ್ರಾಣಿಗಳ ಮೇಲೆ ಲೈಂಗಿಕತೆ ಆಸೆ ಹೊಂದಿದ್ದ ವಿಕೃತಿ ಮನಸ್ಕ ಎಂಬುದು ತಿಳಿದು ಬಂದಿದ್ದು, ಪೊಲೀಸರೇ ದಿಗ್ಭ್ರಾಂತರಾಗಿದ್ದಾರೆ.
ಹೌದು, ಪ್ರಕರಣ ದಾಖಲಿಸಿಕೊಂಡ ಕಾಟನ್ ಪೇಟೆ ಪೊಲೀಸರು, ಕೂಡಲೇ ಏರಿಯಾದ ಸಿಸಿಟಿವಿಗಳನ್ನೆಲ್ಲಾ ಪರಿಶೀಲನೆ ನಡೆಸಿದ್ದಾರೆ. ತಪ್ಪು ಮಾಡಿದ್ದರೂ ಈತ ಯಾಕೆ ತಪ್ಪಿಸಿಕೊಂಡಿಲ್ಲ ಎಂಬ ಅನುಮಾನವೂ ಬಂದಿದೆ. ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಆತನನ್ನು ಬಂಧಿಸಿದ ಪೊಲೀಸರು, ಮೊದಲು ಆತನ ಮೊಬೈಲ್ ಚೆಕ್ ಮಾಡಿದ್ದಾರೆ. ಅಶ್ಲೀಲ ವಿಡಿಯೋಗಳನ್ನೇ ಮೊಬೈಲ್‌ನಲ್ಲಿ ತುಂಬಿಕೊಂಡಿದ್ದ ಆರೋಪಿ ಶೇಖ್ ನಸ್ರುಗೆ, ಪ್ರಾಣಿಗಳನ್ನು ಕಂಡರೆ ವಿಕೃತ ಮನಸ್ಸು ಎನ್ನೋದು ಸ್ಥಳೀಯರನ್ನು ವಿಚಾರಣೆ ಮಾಡಿದಾಗ ತಿಳಿದುಬಂದಿದೆ. ಅದ್ರಲ್ಲೂ ಈತ ಹಸುಗಳನ್ನು ಕಂಡರೆ ಮತ್ತಷ್ಟು ವಿಕೃತವಾಗಿ ನಡೆದುಕೊಳ್ಳುತ್ತಿದ್ದನಂತೆ.
ಇದಿಷ್ಟೇ ಅಲ್ಲ ಕಳೆದ ಕೆಲ ದಿನಗಳ ಹಿಂದೆ ಹಸುಗಳ ಜೊತೆಗೆ ಅಸಭ್ಯ ವರ್ತನೆಗೆ ಮುಂದಾಗಿದ್ದ. ಹಾಗೂ ರಾಡ್ ಹಿಡಿದು ಹಸುವಿನ ಖಾಸಗಿ ಅಂಗಕ್ಕೆ ಇಡಲು ಯತ್ನಿಸಿದ್ದ ಈತನನ್ನು, ಸ್ಥಳೀಯರೇ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದರು. ಆದ್ರೆ ಪೊಲೀಸರಿಗೆ ಈ ವಿಚಾರ ಹೇಳುವುದು ಹೇಗೆ ಎಂದು ತಿಳಿಯದೇ ಸುಮ್ಮನಾಗಿದ್ದಾರೆ ಎನ್ನಲಾಗುತ್ತಿದೆ.