ಕರ್ನಾಟಕ

ಕಾಶಿ ಚಂದ್ರಮೌಳೇಶ್ವರನ ಮೇಲೆ ಬೀಳದ ಸೂರ್ಯರಶ್ಮಿ..ಕಾದಿದೆಯಾ ಗಂಡಾಂತರ..?

ಬಾರಿ ಕಾಶಿ ಚಂದ್ರಮೌಳೇಶ್ವರನ ಲಿಂಗದ ಮೇಲೆ ಸೂರ್ಯರಶ್ಮಿ ಬೀಳದ ಹಿನ್ನೆಲೆ, ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತೀವರ್ಷದಂತೆ ಈ ಬಾರಿಯೂ ಸಂಕ್ರಾಂತಿ ಸಡಗರ ದೇಶದೆಲ್ಲೆಡೆ ಮನೆ ಮಾಡಿದೆ. ಆದರೆ ಈ ಬಾರಿ ಕಾಶಿ ಚಂದ್ರಮೌಳೇಶ್ವರನ ಲಿಂಗದ ಮೇಲೆ ಸೂರ್ಯರಶ್ಮಿ ಬೀಳದ ಹಿನ್ನೆಲೆ, ಜಗತ್ತಿಗೆ ಗಂಡಾಂತರ ಕಾದಿದೆಯಾ ಎಂದು ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಚಂದ್ರವನ ಪೀಠಾಧ್ಯಕ್ಷರಾದ  ಶ್ರೀಗಳು ಕಾಶಿ ಚಂದ್ರಮೌಳೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈ ಬಾರಿ‌ ಪ್ರಕೃತಿ ವಿಕೋಪಗಳು  ಸಂಭವಿಸುವ ಸಾಧ್ಯತೆ ಇದೆ.ಹೆಚ್ಚು ಮಳೆಯಾಗಿ ಅತಿವೃಷ್ಟಿ, ಭೂಕಂಪ ಅನಾಹುತ ಆಗಬಹುದು ಎಂಬ ಸ್ಫೋಟಕ ಹೇಳಿದ್ದಾರೆ. ರಾಷ್ಟ್ರ ರಾಷ್ಟ್ರಗಳ ನಡುವೆ ಯುದ್ಧ ಆಗಬಹುದು. ಇದ್ಯಾವುದು ಆಗಬಾರದು ಎಂದು ನಾನು ಪ್ರಾರ್ಥಿಸಿದ್ದೇನೆ. ಇದೆಲ್ಲವು ಪ್ರಕೃತಿಯ ಮೇಲೆ ನಾವು  ಮಾಡ್ತಿರೋ ಕೆಡುಕುಗಳಿಂದ ವಿಕೋಪಗಳು ಆಗಲಿವೆಸೂರ್ಯ ರಶ್ಮಿ ಲಿಂಗದ ಮೇಲೆ ಬೀಳದೆ ಇರೋದು ಇದೆಲ್ಲದರ ಸೂಚನೆಯಾಗಿದೆ.