ಕರ್ನಾಟಕ

ಸಹಜ ಸ್ಥಿತಿಗೆ ಮರಳಿದ ನಾಗಮಂಗಲ; ಇನ್ಸ್​ ಪೆಕ್ಟರ್​ ಅಮಾನತು

ನಾಗಮಂಗಲದಲ್ಲಿ ಕೋಮು ಘರ್ಷಣೆ ಪ್ರಕರಣದಲ್ಲಿ ನಾಗಮಂಗಲ ಪಟ್ಟಣ ಠಾಣೆ ಇನ್ಸ್ ಪೆಕ್ಟರ್​ ಒಬ್ಬರನ್ನ ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಹಿನ್ನೆಲೆ ಅಶೋಕ್ ಕುಮಾರ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮಂಡ್ಯ : ನಾಗಮಂಗಲ ಗಲಭೆ ಪ್ರಕರಣ ಸಂಬಂಧ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಮಂಡ್ಯ ಕಾರಾಗೃಹಕ್ಕೆ ಆರೋಪಿಗಳು ಶಿಫ್ಟ್ ಮಾಡಲಾಗಿದೆ. ಎಲ್ಲಾ ಆರೋಪಿಗಳನ್ನ ಎರಡು ಭದ್ರತಾ ವಾಹನದಲ್ಲಿ ಮಂಡ್ಯ ಕಾರಾಗೃಹಕ್ಕೆ ಕರೆತರಲಾಗಿದೆ. 

ಇನ್ಸ್ ಪೆಕ್ಟರ್ ಅಮಾನತ್ತು
ನಾಗಮಂಗಲದಲ್ಲಿ ಕೋಮು ಘರ್ಷಣೆ ಪ್ರಕರಣದಲ್ಲಿ ನಾಗಮಂಗಲ ಪಟ್ಟಣ ಠಾಣೆ ಇನ್ಸ್ ಪೆಕ್ಟರ್ ಒಬ್ಬರನ್ನ ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಹಿನ್ನೆಲೆ ಅಶೋಕ್ ಕುಮಾರ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ನಾಗಮಂಗಲಕ್ಕೆ ಹೆಚ್ಡಿಕೆ ಭೇಟಿ 
ನಾಗಮಂಗಲಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಿ ಪರಿಶೀಲನೆ ನಡೆಸಿದ್ದಾರೆ. ಸುಟ್ಟು ಹೋದ ಅಂಗಡಿ ಮಳಿಗೆಗಳ ಭೇಟಿ ನೀಡಿ ಸಂತ್ರಸ್ತರ ಅಳಲನ್ನ  ಆಲಿಸಿದ್ದಾರೆ. ಇನ್ನೂ ಕುಮಾರಸ್ವಾಮಿಯವರಿಗೆ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಮುಖಂಡರು ಸಾಥ್ ನೀಡಿದ್ದಾರೆ. 

ಸಹಜ ಸ್ಥಿತಿಯತ್ತ ಮರಳುತ್ತಿರುವ ನಾಗಮಂಗಲ 
ನಿನ್ನೆಯಿಂದ ಪ್ರಕ್ಷುಬ್ಧಗೊಂಡಿದ್ದ ನಾಗಮಂಗಲ ಪಟ್ಟಣ ಇಂದು ಸಹಜ ಸ್ಥಿತಿಗೆ ಮರಳಿದೆ. ಮುಂಜಾಗ್ರತ ಕ್ರಮವಾಗಿ ಪಟ್ಟಣದಾದ್ಯಂತ  ಬಿಗಿ  ಪೊಲೀಸ್ ಬಂದೋಬಸ್ತ್ ಒದಗಿಲಾಗಿದೆ.  ಇಂದು ಎಂದಿನಂತೆ ದೈನಂದಿನ ಕೆಲಸ ಕಾರ್ಯಗಳಲ್ಲಿ ಜನ-ಸಾಮಾನ್ಯರು ತೊಡಗಿಕೊಂಡಿದ್ದಾರೆ. ಇಂದೂ ಕೂಡ ಪಟ್ಟಣದಾದ್ಯಂತ ನಿಷೇಧಾಜ್ಞೆ ಮುಂದುವರೆದಿದ್ದು, ಪೊಲೀಸ್ ಬಂದೋಬಸ್ತ್ ನಡುವೆಯೇ ಹಂತ ಹಂತವಾಗಿ ನಾಗಮಂಗಲ ಸಹಜ ಸ್ಥಿತಿಯತ್ತ ಮರಳುತ್ತಿದೆ.