ಸಿ.ಟಿ ರವಿ ಅವರ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸಿ.ಟಿ ರವಿ ಅವರನ್ನು ಕ್ಷಮಿಸುವ ಪ್ರಮೇಯ ಇಲ್ಲ.ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ.ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು. ಬೇಗ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ನನ್ನ ಬಳಿ ದಾಖಲೆ ಇವೆ ನಾನು ಇಂದೇ ಬಿಡುಗಡೆ ಮಾಡ್ತೀನಿ. ನಿಮಗೆ ನಾಚಿಗೆ ಆಗಬೇಕು ಎನ್ ಕೌಂಟರ್ ಮಾಡೋದು ಅಂತೀರಾ. ರಾಜಕಾರಣ ಮಾಡಲು ಹೊರಟ್ಟಿದೀರಿ. ಇಡೀ ಕರ್ನಾಟಕ ರಾಜ್ಯದ ಜನರು ಛೀಮಾರಿ ಹಾಕ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಎನು ಮಾಡಬೇಕೋ ಮಾಡಿದ್ದಾರೆ. ಮೂಲ ಕಾರಣ ಏನೂ ಯಾವುದಕ್ಕೋಸ್ಕರ ಎಫ್‌ಐಆರ್ ಮಾಡಿದ್ದಾರೆ. ದೇವರ ಹತ್ರಾ ಹೋಗಿ ನಿಂತ್ಕೊಳ್ತಿರಿ ನಿಮಗೆ ನಾಚಿಗೆ ಆಗಬೇಕು ಎಂದು ಗುಡುಗಿದ್ದಾರೆ.