ಐಕಾನ್‌ಸ್ಟಾರ್ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣದ ಕಾಂಗ್ರೆಸ್ ಮುಖಂಡ ಅನಿರುದ್ಧ್ ರೆಡ್ಡಿ ಕಿಡಿಕಾರಿದ್ದಾರೆ.. ಹೈದ್ರಾಬಾದ್‌ನ ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತಕ್ಕೆ ಮಹಿಳೆ ಮೃತಪಟ್ಟಿದ್ದಾರೆ.. ಈ ಕೇಸ್‌ನ ಆರೋಪಿ ಅಲ್ಲು ಅರ್ಜುನ್ ನಿವಾಸಕ್ಕೆ ಚಿತ್ರರಂಗದ ಗಣ್ಯರು ಸೇರಿ ಹಲವು ನಟರು ಭೇಟಿಯಾಗಿದ್ದಾರೆ.. ಅಷ್ಟೇ ಅಲ್ಲ ನಟ ಅಲ್ಲು ಅರ್ಜುನ್ ತಬ್ಬಿಕೊಂಡು ನುಗುತ್ತಿದ್ದರು, ಇದು ಒಳ್ಳೆಯದಲ್ಲ.. ನಿಮಗೆ ಯಾರಿಗೂ ಮೃತ ಮಹಿಳೆ ಕುಟುಂಬಸ್ಥರು ನೆನಪಾಗಲಿಲ್ವಾ ಅಂತಾ ಅನಿರುದ್ಧ್ ರೆಡ್ಡಿ ಪ್ರಶ್ನಿಸಿದ್ದಾರೆ.. ಚಿತ್ರರಂಗದವರು ಮಾಡುತ್ತಿರುವುದು ವ್ಯವಹಾರ, ಅವರಿಗೆ ಹಣ ಸಿಗುತ್ತದೆ.. ಆದರೆ ಕಾಲ್ತುಳಿತದಲ್ಲಿ ತಾಯಿ ಮೃತಪಟ್ಟಿದ್ದಾಳೆ ಮತ್ತು ಆಕೆಯ ಮಗ ಜೀವನ್ಮರಣ ಹೋರಾಟ ಮಾಡುತ್ತಿದ್ದಾನೆ.. ಆದ್ರೆ ಇದ್ಯಾವುದರ ಬಗ್ಗೆಯೂ ಅಲ್ಲು ಅರ್ಜುನ್ ಮತ್ತು ಚಿತ್ರರಂಗ ಯೋಚಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರನ್ನು ಜೈಲಿಗೆ ಕಳುಹಿಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು ಅಂತಾ ಒತ್ತಾಯಿಸಿದ್ದಾರೆ..