ಕರ್ನಾಟಕ
ಕಿರುತೆರೆಯಲ್ಲಿ ಬರ್ತಿದೆ ಮಾರ್ಟಿನ್ ಸಿನಿಮಾ..!
ಎ. ಪಿ ಅರ್ಜುನ್ ನಿರ್ದೇಶಿಸಿ, ಧ್ರುವ ನಟಿಸಿ, ಉದಯ್ ಕೆ ಮೆಹತ ನಿರ್ಮಾಣ ಮಾಡಿದ್ದ ಮಾರ್ಟಿನ್ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗಲು ಮುಹೂರ್ತ ನಿಗದಿಯಾಗಿದೆ.
ಎ. ಪಿ ಅರ್ಜುನ್ ನಿರ್ದೇಶಿಸಿ, ಧ್ರುವ ನಟಿಸಿ, ಉದಯ್ ಕೆ ಮೆಹತ ನಿರ್ಮಾಣ ಮಾಡಿದ್ದ ಮಾರ್ಟಿನ್ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗಲು ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 11ರಂದು ವಿಶ್ವದ್ಯಂತ ಬಿಡುಗಡೆಯಾಗಿದ್ದ ಹೈ ಬಜೆಟ್ ಸಿನಿಮಾ ಮಾರ್ಟಿನ್ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಲೇ ಇಲ್ಲ. ಸುಮಾರು 80-150ಕೋಟಿ ಖರ್ಚಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು ವಾಪಾಸ್ ಪಡೆದಿದ್ದು ಕೇವಲ 25-30ಕೋಟಿ ಅಷ್ಟೇ. ಈ ಮೂಲಕ ಮಾರ್ಟಿನ್ ಥೀಯೇಟರ್ ನಲ್ಲಿ ಮುಗ್ಗರಿಸಿತ್ತು.ಸದ್ಯ ಓಟಿಟಿಗೂ ಕಾಲಿಟ್ಟಿರೋ ಮಾರ್ಟಿನ್ ಈಗ ಕಿರುತೆರೆಗೂ ಲಗ್ಗೆ ಇಟ್ಟಿದೆ. ಇದೇ ಡಿಸೆಂಬರ್ 29ರಂದು ಸಂಜೆ 4ಗಂಟೆಗೆ ಮಾರ್ಟಿನ್ ಸಿನಿಮಾ ಮನೆ ಮನೆಗೂ ತಲುಪಲಿದೆ.