ಕರ್ನಾಟಕ

ಶೂಟಿಂಗ್ ಮುಗಿಸಿದ 'ಚೌಕಿದಾರ್' ಚಿತ್ರಕ್ಕೆ ಕುಂಬಳಕಾಯಿ ಪ್ರಾಪ್ತಿ..!

'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ಕುಮಾರ್ ನಟಿಸುತ್ತಿರುವ ಚೌಕಿದಾರ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.

'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ಕುಮಾರ್ ನಟಿಸುತ್ತಿರುವ ಚೌಕಿದಾರ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ನಿನ್ನೆ ಚಿತ್ರಕ್ಕೆ ಕುಂಬಳಕಾಯಿ ಹೊಡೆಲಾಯಿತು‌. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಬಳಿಕ ಸುದ್ದಿ ಗೋಷ್ಠಿಯಲ್ಲಿ ಚೌಕಿದಾರ್ ಕಲಾವಿದರು ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.



ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ಈ ಚಿತ್ರದಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ನುರಿತ ನಿರ್ದೇಶಕರು ಇದ್ದಾಗ ಹೇಗೆ ಬೇಕು ಯಾವ ರೀತಿ ಬೇಕು ಅನ್ನೋದನ್ನು ಅವರು ಹೇಳಿಕೊಟ್ಟಿದ್ದಾರೆ. ಮನುಷ್ಯನ ಭಾವನೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಎಮೋಷನ್ ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ. ಸಾಯಿ ಸರ್ ಸೆಟ್ ನಲ್ಲಿ ಇದ್ದ ರೀತಿ. ನಮ್ಮಂತಹ ಕಲಾವಿದರಿಗೆ ಪುಸ್ತಕ ಇದ್ದಂತೆ. ನಿರ್ಮಾಪಕ ಜರ್ನಿ ನನಗೆ ಸ್ಫೂರ್ತಿ ಎಂದು ತಿಳಿಸಿದರು.