ನ್ಯೂ ಇಯರ್ ಸೆಲೆಬ್ರೇಷನ್‌ಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ.. ಇನ್ನೇನು ಕೇವಲ ಒಂದು ವಾರದಲ್ಲಿ ಹೊಸ ವರ್ಷಾಚರಣೆ ಸಮೀಪಿಸಲಿದೆ.. ಬೆಂಗಳೂರಿನ ಪ್ರತಿಷ್ಠಿತಿ ಏರಿಯಾಗಳಲ್ಲಿ ಸಂಭ್ರಮಾಚರಣೆ ಜೋರಾಗಿಯೇ ಇರುತ್ತದೆ.. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್ ಸೇರಿ ಹಲವು ಏರಿಯಾಗಳು ಯುವ ಜನರಿಂದ ತುಂಬಿ ತುಳುಕುತ್ತವೆ.. ಮಧ್ಯರಾತ್ರಿ ವರೆಗೂ ಸೆಲೆಬ್ರೇಷನ್ ಇರೋದ್ರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲು ಗೃಹ ಸಚಿವ ಜಿ. ಪರಮೇಶ್ವರ್, ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ..
ಬೆಂಗಳೂರಿನಲ್ಲಿ ನ್ಯೂ ಇಯರ್ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆ ಪೂರ್ವಭಾವಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.. ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ರೀತಿಯ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.. ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಭೆ ನಡೆಸಲಾಗಿದೆ. ಮಹಿಳಾ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ವರ್ಷಾಚರಣೆ ದಿನ ಬೆಂಗಳೂರು ನಗರದಲ್ಲಿ ಒಟ್ಟಿಗೆ 7 ಲಕ್ಷ ಜನ ಮಿಡ್ ನೈಟ್ ಸೆಲೆಬ್ರೇಶನ್‌ನಲ್ಲಿ ಭಾಗಿಯಾಗುತ್ತಾರೆ. ಏನೇ ಅಹಿತಕರ ಘಟನೆ ನಡೆದರೂ ಆ ಏರಿಯಾ ಡಿಸಿಪಿ ಹೊಣೆಯಾಗಲಿದ್ದಾರೆ. ಟ್ರಾಫಿಕ್ ನಿರ್ವಹಣೆಯ ಸಮಸ್ಯೆ ಆಗದಂತೆ ಮೆಟ್ರೋ, ಆಟೋಗಳು ಮತ್ತು ಬಸ್ಸುಗಳ ಓಡಾಟ ಸೇರಿದಂತೆ ಹಲವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ಇಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ..