ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಲು ಹೊಸ ರಿಯಾಲಿಟಿ ಶೋ ಒಂದು ಸಜ್ಜಾಗಿದೆ. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಹೊಚ್ಚ ಹೊಸ ಶೋ ಒಂದು ಬತರ್ಗಿದೆ. ಅದುವೇ ಸುವರ್ಣ ಸೆಲೆಬ್ರಿಟಿ ಲೀಗ್.
ಸುವರ್ಣ ಸೆಲೆಬ್ರಿಟಿ ಲೀಗ್ ಸ್ಟಾರ್ ಕಲಾವಿದರನ್ನ ಒಳಗೊಂಡಿರುವ ಶೋ ಆಗಿದ್ದು, ಇದರಲ್ಲಿ ಒಟ್ಟು ಎರಡು ತಂಡಗಳಿರುತ್ತವೆ. 10 ಜನ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಸರಿ ಸುಮಾರು 8 ವಾರಗಳ ಕಾಲ ನಡೆಯುವ ಕದನವೇ ಸುವರ್ಣ ಸೆಲೆಬ್ರಿಟಿ ಶೋ. ಮನೋರಂಜನೆಯ ರಸದೌತಣವನ್ನ ಹೊತ್ತು ಬರುತ್ತಿರುವ ಈ ಶೋನಲ್ಲಿ ಮೋಜು ಮಸ್ತಿ ಸ್ವಲ್ಪ ಜಾಸ್ತೀನೆ ಇರುತ್ತದೆ.
ಈ ಶೋನ ಪ್ರಮುಖ ಆಕರ್ಷಣೆ ಅಂದರೆ ನಿರೂಪಣೆ. ಶೋ ಏನೋ ಪ್ಲಾನ್ ಮಾಡಿ ಆಗಿದೆ. ಆದರೆ ಇದರ ಹೋಸ್ಟ್ ಯಾರು ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಹೌದು ಕಿರುತೆರೆ ದಾರವಾಹಿಗಳ ಮೂಲಕ ಅಭಿಮಾನಿಗಳ ಮನಗೆದ್ದು, ಬಿಗ್ ಬಾಸ್ ಕಪ್ ತಮ್ಮದಾಗಿಸಿಕೊಂಡ ಕಾರ್ತಿಕ್ ಮಹೇಶ್, ಈ ಸುವರ್ಣ ಸೆಲೆಬ್ರಿಟಿ ಲೀಗ್ ನ ನಿರೂಪಣೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ.
ಈಗಾಗಲೇ ಶೋಗೆ ಭರ್ಜರಿ ತಯಾರಿ ನಡೆದಿದ್ದು, ಸದ್ಯದಲ್ಲಿ ಅಭಿಮಾನಿಗಳಿಗೆ ಮನೋರಂಜನೆ ನೀಡಲಿದೆ.