ಕರ್ನಾಟಕ

ಇಂದು ಸಂಜೆ 7:30ಕ್ಕೆ 'UI' ನೋಡಲಿದ್ದಾರೆ ಯಶ್‌..! ಎಲ್ಲಿ ಗೊತ್ತಾ?

ಚಿತ್ರರಂಗದ ಗಣ್ಯರಿಗಾಗಿ ʼUIʼ ಸಿನಿಮಾ ತಂಡ ಸೆಲೆಬ್ರಿಟಿ ಶೋ ಏರ್ಪಡಿಸಿದೆ.. ಇಂದಿನ ಸೆಲೆಬ್ರಿಟಿ ಶೋದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಕಾಣಿಸಿಕೊಳ್ಳಲಿದ್ದಾರೆ..

ರಿಯಲ್‌ಸ್ಟಾರ್‌ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಯುಐ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಗ್ತಿದೆ.. ಬಿಡುಗಡೆಯಾದ ಮೂರು ದಿನಗಳಿಂದಲೂ ಹೌಸ್‌ಫುಲ್‌ ಪ್ರದರ್ಶನ ಕಾಣ್ತಿದೆ.. ಈ ಮಧ್ಯೆ ಇದೀಗ ಚಿತ್ರರಂಗದ ಗಣ್ಯರಿಗಾಗಿ ʼUIʼ ಸಿನಿಮಾ ತಂಡ ಸೆಲೆಬ್ರಿಟಿ ಶೋ ಏರ್ಪಡಿಸಿದೆ.. ಇಂದಿನ ಸೆಲೆಬ್ರಿಟಿ ಶೋದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಕಾಣಿಸಿಕೊಳ್ಳಲಿದ್ದಾರೆ.. ಉಪ್ಪಿ ಅಭಿಮಾನಿಯೂ ಆಗಿರುವ ರಾಕಿಭಾಯ್‌, ಇಂದು ಸಂಜೆ 7:15ಕ್ಕೆ ಓರಿಯನ್‌ ಮಾಲ್‌ನಲ್ಲಿ ʼಯುಐʼ ಸಿನಿಮಾ ವೀಕ್ಷಿಸಲಿದ್ದಾರೆ.. ಯಶ್‌ ಮಾತ್ರವಲ್ಲದೇ ಕನ್ನಡ ಚಿತ್ರಂಗದ ನಟ, ನಟಿಯರು ಸೇರಿ ಗಣ್ಯರು ಸಿನಿಮಾ ವೀಕ್ಷಿಸಲಿದ್ದಾರೆ.. ಚಿತ್ರ ವೀಕ್ಷಣೆ ಬಳಿಕ ರಾಕಿಂಗ್‌ಸ್ಟಾರ್‌ ಯಶ್‌ UI ಸಿನಿಮಾ ರಿವ್ಯೂ ಕೊಡಲಿದ್ದಾರೆ..