ಕರ್ನಾಟಕ

ತಪ್ಪಿದ್ರೆ ಕ್ರಮ ಆಗಲಿ..ಆದ್ರೆ ಸಿ.ಟಿ.ರವಿಗೆ ಹಾಗೆ ಮಾಡಬಾರದಿತ್ತು; ವಿ.ಸೋಮಣ್ಣ..!

ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದಾರೆಂಬ ಆರೋಪದ ಬಗ್ಗೆ, ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದಾರೆಂಬ ಆರೋಪದ ಬಗ್ಗೆ, ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದಲ್ಲಿ ಯಾರದ್ದು ತಪ್ಪು ಇದೆ ಎಂಬುದನ್ನ ಸ್ಪೀಕರ್ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಲಿ. ನಮ್ಮದೇನು ಅಭ್ಯಂತರ ಇಲ್ಲ. ನಮ್ಮದೇ ತಪ್ಪಾಗಿದ್ದರು ನಾವು ಅದನ್ನು ಸ್ವೀಕರಿಸುತ್ತೇವೆ‌. ಆದರೆ ಇದನ್ನ ಬಿಟ್ಟು ಪೊಲೀಸರ ಮೂಲಕ ಸಿ.ಟಿ ರವಿ ಈ ರೀತಿ ಟಾರ್ಚರ್ ಕೊಡಿಸಿದ್ದು ಎಷ್ಟು ಸರಿ ಎಂದು, ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.

ಏಳೆಂಟು ಗಂಟೆ ಸಿ.ಟಿ ರವಿ ಅವರನ್ನ ಆ ರೀತಿ ಸುತ್ತಿಸುವ ಅವಶ್ಯಕತೆ ಇತ್ತ. ಸಿದ್ದರಾಮಯ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಬಹಳಷ್ಟು ಹುಳುಕುಗಳು ಶುರುವಾಗಿದೆ. ಈ ಹುಳುಕುಗಳನ್ನ ಮುಚ್ಚಿಕೊಳ್ಳಲು ಈ ವಿಚಾರವನ್ನ ದೊಡ್ಡದು ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರದಲ್ಲಿ ಯಾರಿಗೆ ಬೇಕಾದರೂ ದೂರು ಕೊಡಲಿ. ನಮಗೆ ಏನು ತೊಂದರೆ ಇಲ್ಲ.ಇದು ಸದನದ ವಿಚಾರ. ಅದನ್ನ ಎಲ್ಲಿ ಹೇಗೆ ಮಾತನಾಡಬೇಕು ಎಂಬುದಕ್ಕೆ ಕಾನೂನು ಇದೆ. ಅದರ ವ್ಯಾಪ್ತಿಯಲ್ಲಿ ಎಲ್ಲರೂ ಇರಬೇಕು ಎಂದಿದ್ದಾರೆ.