ಮೈಸೂರು : ಸಿ.ಟಿ ರವಿ ವಿಧಾನ ಪರಿಷತ್ ಕಲಾಪದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅವಾಚ್ಯಶಬ್ಧ ಬಳಸಿದ್ದು ಸತ್ಯ. ನಾನೇ ಆ ಪದವನ್ನ ಕೇಳಿಸಿಕೊಂಡು ಒಂದು ಕ್ಷಣ ಗಾಬರಿಯಾಗಿ ಬಿಟ್ಟೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಟಿ ರವಿಯವರು ಏನು ಇಂತಹ ಪದಗಳನ್ನ ಬಳಸುತ್ತಿದ್ದಾರಲ್ಲ ಅಂದು ಕೊಂಡೆ. ತಕ್ಷಣ ನಾನು ಲಕ್ಷ್ಮಿ ಹೆಬ್ಬಾಳ್ಕರ್ ಬಳಿಗೂ ಹೋದೆ. ಆಗ ಅವರು ಕೂಡ ನನಗೆ ಸಿ.ಟಿ ರವಿ ಬಳಸಿದ ಪದವನ್ನ ಹೇಳಿದರು. ಈಗ ಸಿ.ಟಿ ರವಿ ನಾನು ಆ ಪದವನ್ನ ಬಳಸಿಲ್ಲ ಎಂದು ಹೇಳುತ್ತಿದ್ದಾರೆ. ಸಿ.ಟಿ ರವಿ ಬಳಿಸಿದ್ದು ಫ್ರಸ್ಟೇರೇಟ್ ಎಂಬ ಪದ ಅಲ್ಲ.ಅವರು ಬಳಸಿದ್ದು ಪ್ರಾಸ್ಟಿಟೂಟ್ ಅದಕ್ಕೆ ನಾನೇ ಸಾಕ್ಷಿ.
ಈಗ ಸಿಂಪತಿ ಗಿಟ್ಟಿಸಿಕೊಳ್ಳಲು ಸಿ.ಟಿ ರವಿ ಡ್ರಾಮಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ. ಹೀಗಾಗಿ ಅವರು ಸಿ.ಟಿ ರವಿ ಪರ ನಿಂತಿದ್ದಾರೆ. ಸಿಟಿ ರವಿಯನ್ನ ಪೊಲೀಸರು ಎನ್ ಕೌಂಟರ್ ಮಾಡಲು ಯತ್ನಿಸಿದರು, ಕೊಲೆ ಮಾಡುವ ಪ್ರಯತ್ನ ನಡೆದಿತ್ತು ಎಂಬುಂದೆಲ್ಲಾ ಶುದ್ಧ ಡ್ರಾಮಾ.
ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲಾ ಬರಿ ನಾಟಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.