ಕರ್ನಾಟಕ

"1990s" ಟ್ರೇಲರ್ ಔಟ್ …ಇಂದ್ರಜಿತ್ ಲಂಕೇಶ್ ಸಾಥ್..!

ಕನ್ನಡದಲ್ಲಿ ಹೊಸತಂಡದ ಹೊಸಪ್ರಯತ್ನಗಳಿಗೆ ಕನ್ನಡ ಕಲಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅಂತಹ ಹೊಸತಂಡವೊಂದರ ಹೊಸಪ್ರಯತ್ನ "1990s".

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ "1990s" ಚಿತ್ರ 90ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕಥೆ. ಈಗಾಗಲೇ ಹಾಡು ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. "ತಟ್ ಅಂತ ಹೇಳಿ" ಕಾರ್ಯಕ್ರಮ ಮೂಲಕ ಜನಪ್ರಿಯರಾಗಿರುವ ಡಾ|ನಾ.ಸೋಮೇಶ್ವರ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ "1990s" ಚಿತ್ರದ ಟ್ರೇಲರ್ ಅನಾವರಣ ಮಾಡಿದರು.



ಟಿಕೇಟ್ ಬೆಲೆ ಕಡಿಮೆ ಆಗಬೇಕು ಹಾಗೂ ಕೆಲವು ಚಿತ್ರಮಂದಿಗಳಲ್ಲಿ ಆಸನ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಸರಿ ಹೋಗಬೇಕು ಎಂದು ಸಲಹೆ ನೀಡಿದ ಇಂದ್ರಜಿತ್ ಲಂಕೇಶ್, ಟ್ರೇಲರ್ ಚೆನ್ನಾಗಿದೆ. ಎಂದರು.ಚಿತ್ರದ ಹೆಸರೆ ಹೇಳುವಂತೆ ಇದು ಕಥೆ 90 ರ ಕಾಲಘಟ್ಟದ್ದು. ಪ್ರೇಮಕಥೆಯೇ ಪ್ರಧಾನವಾದರೂ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಸಿ.ಎಂ.ನಂದಕುಮಾರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.ಅರುಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ..

ನಟ ದೇವ್, ಸಂಗೀತ ನಿರ್ದೇಶಕ ಮಹಾರಾಜ,  ಛಾಯಾಗ್ರಾಹಕ ಹಾಲೇಶ್,  ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಮುಂತಾದ ಚಿತ್ರತಂಡದ ಸದಸ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಫೆಬ್ರವರಿ 28 ಕ್ಕೆ ಸಿನಿಮಾ ತೆರೆಗೆ ಬರಲಿದೆ.