ಕನ್ನಡಿಗರು ಕಟ್ಟಿ-ಬೆಳೆಸಿದ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ತಂತ್ರಜ್ಞಾನ ವಿಚಾರದಲ್ಲಿ ಮುಂಚೂಣಿಯಲ್ಲಿರುವ ನಗರ. ದೇಶದ ಅಭಿವೃದ್ಧಿಗೆ ದೊಡ್ಡಮಟ್ಟದ ಕೊಡುಗೆ ಕೊಡ್ತಿರುವ ರಾಜ್ಯ ಅಂದ್ರೆ ಅದು ಕರ್ನಾಟಕ. ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂಬ ಖ್ಯಾತಿ ಪಡೆದಿದೆ. ಇಲ್ಲಿನ ಶಾಂತಿಯುತ, ಸೌಹಾರ್ದಯುತ ವಾತಾವರಣ ದೇಶ, ವಿದೇಶಗಳ ಜನರನ್ನು ಆಕರ್ಷಿಸುತ್ತಿದೆ. ದಿನದಿಂದ ದಿನಕ್ಕೆ ನಗರಕ್ಕೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಹೀಗೆ ನಗರಕ್ಕೆ ವಲಸೆ ಬಂದ ಬಹುತೇಕರು, ಸ್ಥಳೀಯರ ಜೊತೆ ನಡೆಸುತ್ತಿರುವ ಕಿತ್ತಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಕೆಲಸ ಅರಸಿ ಬಂದವರು, ಇಲ್ಲಿನ ಭಾಷೆ ಕಲಿಯದೇ ಉದ್ಧಟತದಲ್ಲಿ ವರ್ತಿಸುತ್ತಿದ್ದಾರೆ. ಇದೇ ಇದೀಗ ಕನ್ನಡಿಗರನ್ನ ಕೆರಳಿಸಿದೆ. ಇಂಥವರ ವಿರುದ್ಧ ಕೆರಳಿರುವ ಬಹುತೇಕರು ತಮ್ಮ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಈ ಮಧ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ 'ಉತ್ತರ ಭಾರತೀಯರಿಗೆ ಬೆಂಗಳೂರು ಬಂದ್ ' ಎಂಬ ಫೋಸ್ಟ್ ವೈರಲ್ ಆಗಿದೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ 'ಕನ್ನಡ ನಾಡಿನಲ್ಲಿದ್ದು ಕನ್ನಡ ಕಲಿಯದ ಉತ್ತರ ಭಾರತೀಯರಿಗೆ ಹಾಗೂ ಅಕ್ಕಪಕ್ಕದ ರಾಜ್ಯದವರಿಗೆ ಬೆಂಗಳೂರಿನ ಬಾಗಿಲು ಮುಚ್ಚಿದೆ. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಗೆ ಬೆಲೆ ಕೊಡಲು ಸಿದ್ಧವಿಲ್ಲದವರಿಗೆ ಬೆಂಗಳೂರಿನ ಅವಶ್ಯಕತೆಯಿಲ್ಲ ಎಂದು ಪೋಸ್ಟ್ ಮಾಡಲಾಗಿದೆ.
ಹೌದು. ರೋಡ್ ಸೈಡ್ ವ್ಯಾಪಾರದಿಂದ ಹಿಡಿದು ಪ್ರತಿಷ್ಠಿತ ಹೋಟೆಲ್, ಕಂಪನಿ, ಸೆಕ್ಯೂರಿಟಿ ಸೇರಿ ಎಲ್ಲಾ ಕಡೆಗಳಲ್ಲಿ ಉತ್ತರ ಭಾರತದಿಂದ ಬಂದವರೇ ಅಧಿಕ ಮಂದಿ ಇದ್ದಾರೆ. ಹೀಗೆ ಬಂದವರಿಗೆ ಕನ್ನಡಿಗರು ನೆಮ್ಮದಿಯ ಬದುಕನ್ನೇ ಕೊಟ್ಟಿದ್ದಾರೆ. ಆದ್ರೆ ದುಡಿಮೆ, ನೆಮ್ಮದಿಯ ಜೀವನ ಕೊಟ್ಟ ಕನ್ನಡಗರ ಜೊತೆ ಉತ್ತರ ಭಾರತೀಯರ ಉದ್ದಟತನದಿಂದ ವರ್ತಿಸೋದು ನಡೆಯುತ್ತಲೇ ಇದೆ. ಸ್ಥಳೀಯ ಭಾಷೆ ಕಲಿಯದೇ ಕ್ಯಾತೆ ತೆಗೆಯುವವರೇ ಹೆಚ್ಚಾಗಿದ್ದಾರೆ. ಹುಟ್ಟಿ ಬೆಳೆದ ಊರನ್ನೇ ಉದ್ದಾರ ಮಾಡದ ಉತ್ತರ ಭಾರತೀಯರು, ಬೆಂಗಳೂರು ಉದ್ಧಾರ ಮಾಡಿದ್ದೇನೆ ಅಂತಾ ಈಗಾಗಲೇ ಹಲವು ಬಾರಿ ನಾಲಗೆ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರು ನಮ್ಮಿಂದಲೇ ಎನ್ನುವ ಮಾತುಗಳೂ ಕನ್ನಡಿಗರನ್ನ ಕೆರಳಿಸಿವೆ.
ಕನ್ನಡ ಕಲಿಯದ ಅನ್ಯಭಾಷಿಗರ ಕುರಿತಾದ ಇಂಥ ಚರ್ಚೆಯು ನಡೆಯುತ್ತಿರುವ ಇದೇ ಮೊದಲೇನಲ್ಲ. ಬೆಂಗಳೂರಲ್ಲಿ ಉದ್ಯೋಗವಕಾಶಗಳಿಗಾಗಿ ಹೊರರಾಜ್ಯಗಳಿಂದ ಬಂದವರು ಕನ್ನಡವನ್ನು ಕಲಿಯಬೇಕು, ಇಲ್ಲಿನ ನೆಲ, ಜಲ, ಭಾಷೆಗೆ ಬೆಲೆ ಕೊಡಬೇಕು ಎಂಬುದು ಕನ್ನಡಿಗರ ವಾದ. ಇದೇ ವಿಚಾರವಾಗಿ, ಉತ್ತರ ಭಾರತೀಯರಿಗೂ, ಕನ್ನಡಿಗರಿಗೂ ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ನಡೆಯುತ್ತಿರುತ್ತದೆ.
ಕನ್ನಡ ಭಾಷೆಯ ವಿಚಾರಕ್ಕಾಗಿ ಹಲವಾರು ಉತ್ತರ ಭಾರತೀಯರು ಕನ್ನಡಿಗರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಿದೆ. ಕನ್ನಡ ಕರ್ನಾಟಕದ ಮಾತೃಭಾಷೆ. ದಕ್ಷಿಣ ಭಾರತೀಯರು ಎಲ್ಲೇ ಹೋದ್ರೂ ಅಲ್ಲಿನ ಭಾಷೆ ಕಲಿತು, ಅಲ್ಲಿನ ಜನರ ಜೊತೆ ಬೆರೆಯುತ್ತಾರೆ. ಆದ್ರೆ ಉತ್ತರ ಭಾರತೀಯರ ಆಗಲ್ಲ. ಕನ್ನಡ್ ಬರಲ್ಲ ಎನ್ನುತ್ತಲೇ ಬೆಂಗಳೂರಲ್ಲೇ ಬದುಕು ನಡೆಸಿಬಿಡುತ್ತಾರೆ.
ಅನ್ಯಭಾಷಿಗರ ಜೊತೆಗಿನ ವಾಗ್ವಾದಲ್ಲಿ ಕನ್ನಡಿಗರ ನಿರಭಿಮಾನವೂ ಎದ್ದು ಕಾಣುತ್ತದೇ. ಕನ್ನಡ ಕಲಿಯದಿದ್ದರೆ ಬದುಕೋದು ಕಷ್ಟ ಎನ್ನುವಂಥ ವಾತಾವರಣವನ್ನ ಕನ್ನಡಿಗರು ನಿರ್ಮಿಸಬೇಕಿತ್ತು. ಆದ್ರೆ ಅದನ್ನ ಕನ್ನಡಿಗರು ಮಾಡಿಲ್ಲ. ಬಹುಭಾಷಾ ಪಂಡಿತರಾದ ಕನ್ನಡಿಗರು, ಅನ್ಯಭಾಷಿಗರ ಜೊತೆ ಅವರದ್ದೇ ಭಾಷೆ ಮಾತನಾಡಿ ಬಿಡ್ತಾರೆ. ಹೀಗಾಗಿ ಅವರೂ ಕನ್ನಡ ಕಲಿಯುವ ಪ್ರಯತ್ನ ಮಾಡಲ್ಲ. ಹೀಗಾಗಿ ಭಾಷೆ ಅನ್ನೋದು ಕೇವಲ ಚರ್ಚೆ ವಿಷಯವಾಗಿದೆ ಹೊರತು. ಕಲಿಯುವ ಪ್ರಯತ್ನವಾಗಿಲ್ಲ. ಮೊದಲು ಅನ್ಯಭಾಷಿಗರ ಜೊತೆ ಕನ್ನಡಿಗರು, ಮಾತೃ ಭಾಷೆಯಲ್ಲಿಯೇ ಮಾತನಾಡಬೇಕಿದೆ. ಅಷ್ಟೇ ಅಲ್ಲ ಉದ್ಯೋಗಿ ಅರಸಿ ಬಂದವರು ಸ್ಥಳೀಯ ಭಾಷೆ, ಸಂಸ್ಕೃತಿಯನ್ನ ಕಲಿಯಬೇಕಿದೆ. ಒಟ್ಟಿನಲ್ಲಿ ʼʼಉತ್ತರ ಭಾರತೀಯರಿಗೆ ಬೆಂಗಳೂರು ಕ್ಲೋಸ್ʼ ಅನ್ನೋದು ಚರ್ಚೆ ಅಂತೂ ಹುಟ್ಟು ಹಾಕಿದೆ.