ಬೆಳಗಾವಿ: ದೇವದಾಸಿಯರ ಮಾಶಾಸನ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು. ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ. ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ನೀಡಬೇಕು ಅಂತ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಒತ್ತಾಯಿಸಿದ್ರು.
ಇದಕ್ಕೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿ, ದೇವದಾಸಿಯರಿಗೆ ಸರಿಯಾಗಿ ಮಾಶಾಸನ ಡಿಬಿಟಿ ಮೂಲಕ ಹಾಕಲಾಗ್ತಿದೆ. ಎಲ್ಲೂ ಕೂಡಾ ಮಾಶಾಸನ ಸೋರಿಕೆ ಆಗ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ ಅನ್ನೋ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದರು.
ಇನ್ನು ದೇವದಾಸಿಯರಿಗೆ 2 ಸಾವಿರ ರೂ. ಮಾಶಾಸನ ಕೊಡಲಾಗುತ್ತಿದೆ. ಪ್ರತಿ ವರ್ಷ 250 ದೇವದಾಸಿಯರಿಗೆ ಒಂದು ಸಾರಿಗೆ ಪ್ರೊತ್ಸಾಹ ಧನವಾಗಿ 30 ಸಾವಿರ ನೀಡಲಾಗುತ್ತದೆ. ದೇವದಾಸಿಯರಿಗೆ ಆರೋಗ್ಯ ತಪಾಸಣೆ ಮಾಡೋ ಕೆಲಸ ಆಗ್ತಿದೆ. ಮನೆಗಳು ಕೊಡೋ ಬಗ್ಗೆ ನಾವು ಪಟ್ಟಿ ಮಾಡಿ ವಸತಿ ಇಲಾಖೆಗೆ ಕಳಿಸುತ್ತೇವೆ. ಅವರು ಅಂತಿಮ ನಿರ್ಧಾರ ಮಾಡಬೇಕು. ಯಾರು ಅರ್ಜಿ ಹಾಕಿರುತ್ತಾರೋ ಅವರಿಗೆ ಆದ್ಯತೆ ಮೇರೆಗೆ ಮನೆ ಹಂಚಿಕೆ ಮಾಡುತ್ತದೆ.
ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ಕೊಡಲಾಗ್ತಿದೆ. ಯಾರಿಗಾದರೂ ಸಿಗದೇ ಇದ್ದರೆ ಮಾಹಿತಿ ಕೊಟ್ಟರೆ ಅವರಿಗೆ ಗೃಹಲಕ್ಷ್ಮಿ ಯೋಜನೆ ಕೊಡುತ್ತೇವೆ ಎಂದು ತಿಳಿಸಿದರು. ಸೌಲಭ್ಯ ದೊರೆಯದ ಬಗ್ಗೆ ಯಾವುದೇ ದೂರು ಸಲ್ಲಿಕೆಯಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.