ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತಣ್ಣ ಕಪ್ ಗೆದ್ದು ಮಿಂಚುತಿದ್ದಾರೆ. ಆದ್ರೆ ಹನುಮಂತನ ಗೆಲುವಿನ ಬಗ್ಗೆ ತ್ರಿವಿಕ್ರಮಂ ತಾಯಿ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ತ್ರಿವಿಕ್ರಂ ಪ್ರತಿಕ್ರಿಯೆ ನೀಡಿದ್ದಾರೆ.
ಹನುಮಂತ ಬಿಗ್ ಬಾಸ್ ಗೆಲ್ಲಬಾರದಿತ್ತು. ಆತ ಏನೂ ಮಾಡಿಲ್ಲ ಎಂದಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ತಾಯಿಯ ಹೇಳಿಕೆ ಟ್ರೋಲ್ ಆಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿದ ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಮ್ ನನ್ನ ಮಗ ಗೆಲ್ಲಬೇಕು ಎಂದು ಎಲ್ಲಾ ತಾಯಂದರಿಗೂ ಇರುವ ಆಸೆ. ಈ ಆಸೆಯನ್ನೇ ತಾಯಿ ಕೂಡ ವ್ಯಕ್ತಪಡಿಸಿದ್ದಾರೆ.. ಬೇರೆ ಯಾರೇ ಗೆದ್ದರೂ ಅವರಿಗೆ ಬೇಸರ ಆಗುತ್ತದೆ ತಾಯಿ ಪ್ರೀತಿ ಅಷ್ಟೇ. ಇದನ್ನು ವಿವಾದ ಮಾಡುವ ವಿಚಾರ ಎನೂ ಇಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಹನುಮಂತ ಗೆದ್ದಿರುವುದು ಖಂಡಿತವಾಗಿಯೂ ಖುಷಿ ಇದೆ ಎಂಬುದು ತ್ರಿವಿಕ್ರಮ್ ಮಾತು. ಹನುಮಂತಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ 5 ಕೋಟಿ ವೋಟ್ ಬಿದ್ದಿದೆ ಎಂಬ ವಿಚಾರದಲ್ಲಿ ಯಾವುದೇ ಅಚ್ಚರಿ ಕೂಡ ಆಗಿಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ.