ಕರ್ನಾಟಕ

ಹೊಸ ಕ್ರಾಂತಿಗೆ ಮುನ್ನುಡಿ ಬರೆದ ‘ಡಾಲಿ’.. ಹೇಗಿದೆ ಗೊತ್ತಾ ‘ಜಿಂಗೋ’ ಟೀಸರ್?

ಶಾಂತಿಯ ತೋಟದಲ್ಲಿ ಕ್ರಾಂತಿ ಮಾಡಲು ಹೊರಟಿರುವಂತಿವ ‘ಜಿಂಗೋ’ ಟೀಸರ್ ದನಂಜಯ್​ ಅವರ ಧ್ವನಿಯೊಂದಿಗೆ ಆರಂಭವಾಗುತ್ತೆ. ಶಾಂತಿಯ ತೋಟದೊಳಗೆ ನೆಮ್ಮದಿಯಾಗಿದ್ದ ಕುರಿಗಳನ್ನ ಬಲಿಪಡೆಯೋಕೆ ಶತ್ರುಗಳು ಹೊಂಚು ಹಾಕುತ್ತಿರುತ್ತವೆ.

ಕನ್ನಟ ಚಿತ್ರರಂಗದ ಪ್ರತಿಭಾನ್ವಿತ ನಟ ಅಂದ್ರೆ ಅದು ಡಾಲಿ ಧನಂಜಯ್. ವಿಭಿನ್ನ ಕಥೆಗಳ ಆಯ್ಕೆಗಳ ಮೂಲಕ ಗಮನ ಸೆಳೆಯುವ ಧನಂಜಯ್ ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ತೆರೆ ಮೇಲೆ ಹೀರೋ ಆಗಿ ಮಿಂಚೋಕು ಸೈ. ವಿಲನ್ ಆಗಿ ಆರ್ಭಟಿಸೋಕು ಜೈ ಅಂತಾರೆ ಧನಂಜಯ್. ಪಾತ್ರ ಯಾವುದಾದರೇನು? ಕಥೆಗೆ ಜೀವತುಂಬುವುದು ಕಲಾವಿದನ ಕರ್ತವ್ಯ ಎಂದು ನಟನೆಯನ್ನ ಪೂಜಿಸುವ ವ್ಯಕ್ತಿತ್ವ ಅವರದ್ದು. 

ಹೌದು, ಅಭಿಮಾಜಿಗಳ ನೆಚ್ಚಿನ ಡಾಲಿಗೆ ಇಂದು ಜನ್ಮದಿನದ ಸಂಭ್ರಮ. ಈ ದಿನವೇ ಡಾಲಿ ಅಭಿಮಾನಿಗಳಿಗೊಂದು ಸಿಹಿಯಾದ ಸಿನಿ ಸಮಾಚಾರವನ್ನ ನೀಡಿದ್ದಾರೆ. ಧನಂಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಜಿಂಗೋ’ ಚಿತ್ರದ ಸಣ್ಣ ಟೀಸರ್ ಬಿಡುಗಡೆ ಮಾಡಿದ್ದಾರೆ. ಕ್ರಾಂತಿಗೆ ಮುನ್ನುಡಿ ಬರೆಯುವ ಈ ಚಿತ್ರದ ಟೀಸರ್ ಮೊದಲ ನೋಟದಲ್ಲೇ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. 

ಡೇರ್ ಡೆವಿಲ್ ಮುಸ್ತಾಫಾದಂತಹ ಅದ್ಭುತ ಸಿನಿಮಾವನ್ನ ಕೊಟ್ಟ ಸೊಗ್ಗಾಲ್ ‘ಜಿಂಗೋ’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಬಿ. ನಾಗೇಂದ್ರ ರೆಡ್ಡಿ  ಜೊತೆ ಸೇರಿ ಸ್ವತಃ ಧನಂಜಯ್ ಕೂಡ ಬಂಡವಾಳ ಹಾಕಿದ್ದಾರೆ. ಸಣ್ಣ ಟೀಸರ್ನಿಂದಲೇ ಭಾರಿ ಸೌಂಡ್ ಮಾಡುತ್ತಿರುವ  ‘ಜಿಂಗೋ’ ಡಾಲಿಗೆ ಹೇಳಿ ಮಾಡಿಸಿದಂತಿದೆ. 

ಶಾಂತಿಯ ತೋಟದಲ್ಲಿ ಕ್ರಾಂತಿ ಮಾಡಲು ಹೊರಟಿರುವಂತಿವ ‘ಜಿಂಗೋ’ ಟೀಸರ್ ದನಂಜಯ್ ಅವರ ಧ್ವನಿಯೊಂದಿಗೆ ಆರಂಭವಾಗುತ್ತೆ.  ನೆಮ್ಮದಿಯಾಗಿದ್ದ ಕುರಿಗಳ ಗುಂಪನ್ನ ಬಲಿಪಡೆಯೋಕೆ ಶತ್ರುಗಳು ಹೊಂಚು ಹಾಕುತ್ತಿರುತ್ತವೆ. ಆದರೆ ಆ ಮುಗ್ಧ ಕುರಿಗಳನ್ನ ಕಾಯೋದಕ್ಕೆ, ಶತೃಗಳಿಗೆ ತಿರುಗೇಟು ನೀಡೋದಕ್ಕೆ ಒಬ್ಬ ನಾಯಕನಿದ್ದಾನೆ. ಅವನೇ ‘ಜಿಂಗೋ’.

 ಟೀಸರ್ ಆರಂಭದಲ್ಲಿ ಅಲ್ಲಿ ಬಂದೂಕು, ಗನ್ಗಳಿರುತ್ತವೆ. ಆದರೆ ಕಾಂತ್ರಿಯಾಗಬೇಕೆಂದರೆ ಅಲ್ಲಿ ಆಯುದಗಳು ಬೇಕೆಂದೇನಿಲ್ಲ. ನಮ್ಮ ಧ್ವನಿ ಗಟ್ಟಿಯಾಗಿರಬೇಕೆಂದು ಧ್ವನಿಯ ಪ್ರತಿನಿಧಿ ಮೈಕ್ಅನ್ನ ಜಿಂಗೋ ಆಯ್ಕೆ ಮಾಡಿಕೊಳ್ಳುತ್ತಾನೆ. ನಂತರ ಟೀಸರ್ನ ಒಂದೊಂದು ದೃಶ್ಯವೂ ರೋಮಾಂಚನ. ಸುರಿಯುವ ಮಳೆಯಲ್ಲಿ. ದೊಡ್ಡ ಜನಸಮೂಹದ ಮಧ್ಯೆ ಮೈಕ್ ಹಿಡಿದು ನಾಯಕನಾಗಿ ಜಿಂಗೋ ಆರ್ಭಟಿಸುತ್ತಾನೆ.

ನಾನು ಗಂಢಬೇರುಂಢನಾಗಿ ಹಾರುತ್ತಿದ್ದರೆ, ನನ್ನ ರೆಕ್ಕೆ ನೀವಾಗಿರಬೇಕು. ನಾನು ಬೆಂಕಿಯಾಗಿ ಉರೀಯುತ್ತಿದ್ದರೆ ಬೀಸೊ ಬಿರುಗಾಳಿ ನೀವಾಗಿರಬೇಕು. ಶಾಂತಿಯ ತೋಟದ ಮೇಲೆ ನಂಬಿಕೆ ಇಲ್ಲ ಹಾಗಾಗಿ ನಾವು ಈಗ ಉತ್ತಿ ಬಿತ್ತಬೇಕಾಗಿರೋದು ಕ್ರಾಂತಿಯ ತೋಟ ಎನ್ನುವ ಡಾಲಿಯ ಮಾತು ಆಬ್ಬರದ ಳೆಯಲ್ಲೂ ಜನಸಮೂಹಕ್ಕೆ ಕ್ರಾಂತಿಯ ಬಿಸಿಯನ್ನೇರಿಸುತ್ತದೆ. 

ಇನ್ನೂ  ಈ ಸಣ್ಣ ಟೀಸರ್ ಉದ್ದಕ್ಕೂ ಕೇವಲ ಡಾಲಿ ಮಾತ್ರ ಕಾಣಿಸುತ್ತಾರೆ. ಆಗಾಗಿ ಚಿತ್ರದಲ್ಲಿರುವ ತಾರಬಳಗದ ಬಗ್ಗೆ ಇನ್ನೂ ಇನ್ನೂ ಸುಳಿವನ್ನ ಬಿಟ್ಟುಕೊಟ್ಟಿಲ್ಲ. ಆದರೆ ಈ ಚಿತ್ರದ ಬಗ್ಗೆ ನಾನಾ ಚರ್ಚೆಗಳು ಶುವಾಗಿವೆ. ಎಲ್ಲರ ಭಾಯಲ್ಲೂ ಜಿಂಗೋದೇ ಮಾತು ಕೇಳಿಸುತ್ತಿದೆ.

ಇನ್ನೂ, ಈ ಟೀಸರ್ ನೋಡಿದ ಡಾಲಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.  ವಿಶ್ವಮಾನವ ಡಾಲಿಧನಂಜಯ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಒಳ್ಳೆಯ ಕತೆ , ಒಳ್ಳೆಯ ನಟನೆ ಜೊತಗೆ ಮನರಂಜನೆ ನೀಡೋಕೆ ಹೊರಕಿದ್ದಾರೆ. ಹಾಗಾಗಿ ಬಡವರ ಮಕ್ಕಳು ಬೆಳೀಬೇಕು ಕಂಡ್ರಯ್ಯ..  ಬಹಳ ದಿನ ಆದ್ಮೇಲೆ ಒಂದು ಅಪ್ಪಟ ಕನ್ನಡ ಚಿತ್ರ ನೋಡ್ತಾ ಇದೀನಿ ಅನ್ನಿಸಿತು. ಯಪ್ಪೋ ಏನ್ ವಾಯ್ಸ್ ಗುರು ನಿಂದು ಅಂತೆಲ್ಲಾ ಕಮೆಂಟ್ಗಳ ಮೇಲೆ ಕಮೆಟಂಟ್ ಮಾಡುತ್ತಿದ್ದಾರೆ.