ಕಾಟೇರ ಸಿನಿಮಾದಲ್ಲಿ ನಟ ದರ್ಶನ್ ಜೊತೆ ನಟಿಸಿರುವ ಬಾಲನಟ ರೋಹಿತ್, ರಸ್ತೆ ಅಪಘಾತಕ್ಕೀಡಾಗಿದ್ದು ಗಂಭೀರ ಗಾಯಗಳಾಗಿವೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪಾಲಹಳ್ಳಿಯಲ್ಲಿ, ಕಾರು ಮತ್ತು ಬಸ್ ಮುಖಾಮುಖಿಯಾಗಿ ಈ ದುರಂತ ಸಂಭವಿಸಿದೆ. ಸದ್ಯ ಗಾಯಾಳು ರೋಹಿತ್ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರಿ ಅಪಘಾತದಿಂದ ರೋಹಿತ್ ದಂತದ ವಸಡು ಕಟ್ ಆಗಿ, ತಲೆ ಬುರುಡೆಗೆ ಗಾಯವಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಅಲ್ಲದೇ ಅಪಘಾತದಲ್ಲಿ ರೋಹಿತ್ ತಾಯಿ ಛಾಯಾಲಕ್ಷ್ಮಿ ಅವರಿಗೂ ಕಾಲು-ಕೈಗಳಿಗೆ ಗಾಯಗಳಾಗಿವೆ. ಗೆಳೆಯ ಹಾಗೂ ಉಪನ್ಯಾಸಕ ಸೇರಿ ನಾಲ್ವರಿಗೆ ಗಾಯಗಳಾಗಿದೆ. ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ತೆರಳುವಾಗ, ಟೂರಿಸ್ಟ್ ಬಸ್ ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಇನ್ನು ಬಾಲನಟ ರೋಹಿತ್ ‘ಒಂದಲ್ಲ ಎರಡಲ್ಲ‘ ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು.