ದೇಶ

ದಿಲ್ಲಿ ಚುನಾವಣೆ ಗೆಲ್ಲಲು ʼಕೇಜ್ರಿವಾಲ್‌ ಕಿ ಗ್ಯಾರಂಟಿʼ.. ಆಪ್‌ ಪ್ರಣಾಳಿಕೆಯಲ್ಲಿ ಏನೇನಿದೆ..?

ದೇವಾಲಯ ಮತ್ತು ಗುರುದ್ವಾರ ಅರ್ಚಕರಿಗೆ ತಿಂಗಳಿಗೆ 18,000 ರೂ.ಗಳ ಗೌರವಧನವನ್ನು ನೀಡುತ್ತೇವೆ ಎಂದು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ದೆಹಲಿಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಎಎಪಿ ಕಸರತ್ತು ಜೋರಾಗಿದೆ. ಅಮ್‌ ಆದ್ಮಿ,  ಕಾಂಗ್ರೆಸ್‌,  ಬಿಜೆಪಿ ಮಧ್ಯೆ ಬಿಗ್‌ ಫೈಟ್‌ ನಡೆಯುತ್ತಿದೆ. ಈ ಮಧ್ಯೆ ಜನರ ಮನಸ್ಸು ಗೆಲ್ಲಲು ಎಎಪಿ ಇಂದು ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಇಂದು ಉಚಿತ ಗ್ಯಾರಂಟಿ ಒಳಗೊಂಡ 15 ಭರವಸೆಗಳ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ʼಮಹಿಳಾ ಸಮ್ಮಾನ್ ಯೋಜನೆʼ ಅಡಿಯಲ್ಲಿ ತಿಂಗಳಿಗೆ 2100 ರೂಪಾಯಿ. ದೆಹಲಿಯಲ್ಲಿ ಶಾಲಾ / ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮತ್ತು ದೆಹಲಿ ಮೆಟ್ರೋದಲ್ಲಿ 50% ರಿಯಾಯಿತಿ ನೀಡುತ್ತೇವೆ ಎಂದು ಭರವಸೆ ನೀಡಲಾಗಿದೆ.

ʼಕೇಜ್ರಿವಾಲ್‌ ಕಿ ಗ್ಯಾರಂಟಿʼ ಬಿಡುಗಡೆ ಮಾಡಿದ್ದೇವೆ ಎಂದಿರುವ ಎಎಪಿ, ದೆಹಲಿ ಜನರ ಮನಗೆಲ್ಲಲು ಮತ್ತಷ್ಟು ಭರವಸೆ ನೀಡಿದೆ. ಉದ್ಯೋಗದ ಖಾತರಿ ನೀಡುವುದಾಗಿ ಹೇಳಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಸಂಜೀವಿನಿ ಯೋಜನೆ, ಅಧಿಕಾರಕ್ಕೆ ಬಂದ ನಂತರ ಹಳೆಯ ನೀರಿನ ಬಿಲ್ ಮನ್ನಾ. ನಾವು ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗಲಿಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಮುಂದಿನ 5 ವರ್ಷಗಳಲ್ಲಿ, ಯಮುನಾ ನದಿಯ ಶುದ್ಧೀಕರಣ, ಮನೆಗಳಲ್ಲಿ 24 ಗಂಟೆಗಳ ನೀರು ಮತ್ತು ದೆಹಲಿಯ ರಸ್ತೆಗಳನ್ನು ಯುರೋಪಿಯನ್ ಗುಣಮಟ್ಟದಲ್ಲಿ ಮಾಡುವುದನ್ನು ನಾವು ಖಚಿತಪಡಿಸುತ್ತೇವೆ ಎಂದಿದ್ದಾರೆ. ಯಾವುದೇ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬಯಸುವ ದಲಿತ ವಿದ್ಯಾರ್ಥಿಗಳ ಶಿಕ್ಷಣ, ಪ್ರಯಾಣ ಮತ್ತು ವಾಸ್ತವ್ಯದ ವೆಚ್ಚವನ್ನು ಭರಿಸಲು ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆ ಜಾರಿ. ದೇವಾಲಯ ಮತ್ತು ಗುರುದ್ವಾರ ಅರ್ಚಕರಿಗೆ ತಿಂಗಳಿಗೆ 18,000 ರೂ.ಗಳ ಗೌರವಧನವನ್ನು ನೀಡುತ್ತೇವೆ ಎಂದು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅತಿಶಿ, ಮನೀಶ್ ಸಿಸೋಡಿಯಾ ಸೇರಿ ಹಲವರು ಭಾಗಿಯಾಗಿದ್ದರು.

#WATCH | Aam Aadmi Party releases 15 poll guarantees including Rs 2,100 for women and free bus rides to students, ahead of Delhi Assembly elections pic.twitter.com/vPvUNKYJ0h