ಕರ್ನಾಟಕ

'ಸೂರ್ಯ'ಗೆ 'ಕೆವಿಎನ್' ನಿರ್ಮಾಣ

ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಛಾಪು ಮೂಡಿಸ್ತಿದೆ

ಬೆಂಗಳೂರು : ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ.. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಛಾಪು ಮೂಡಿಸ್ತಿದೆ..ಇದೀಗ ತಮಿಳಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಸದ್ಯ ವಿಜಯ್ ನಟನೆಯ 'ಜನ ನಾಯಗನ್' ನಿರ್ಮಾಣ ಮಾಡ್ತಿರೋ ಕೆವಿಎನ್ , ಇದೀಗ ಮತ್ತೊಂದು ತಮಿಳು ಸಿನಿಮಾಗೆ ಬಂಡವಾಳ ಹೂಡಲು ಮುಂದಾಗುತ್ತಿದೆ. 

ಹೌದು , ಸಿನಿಮಾದಲ್ಲಿನ ರೋಲೆಕ್ಸ್ ಪಾತ್ರವೇ ಈಗ ಸಿನಿಮಾವಾಗಿ ನಿರ್ಮಾಣ ಆಗ್ತಿದೆ. ಸೂರ್ಯ ಮತ್ತು ಲೋಕೇಶ್ ಕನಗರಾಜ್ ಕಾಂಬಿನೇಷನ್ನಲ್ಲಿ ಈ ಸಿನಿಮಾ ಬರ್ತಿದ್ದು ಕೂಲಿ, ಖೈದಿ 2 ಬಳಿಕ ಟೇಕಾಫ್ ಆಗಲಿದೆ.  ಸೂರ್ಯ ಮತ್ತೆ ರೋಲೆಕ್ಸ್ ಆಗಿ ಮಿಂಚೋದು ಕನ್ಫರ್ಮ್ ಆಗಿದ್ದು, ಕೆವಿಎನ್ ನಿರ್ಮಾಣ ಮಾಡೋದು ಕೂಡ ಬಹುತೇಕ ಖಚಿತವಾಗಿದೆ.