ಬೆಂಗಳೂರು : ರಾಜ್ಯ ರಾಜಧಾನಿಯ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿಯಲ್ಲಿ ಪ್ರತಿವರ್ಷ ನಲವತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಹಾಗೂ ಆರು ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಆದರೆ ಈ ಬಾರಿ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಬಿಎಂಟಿಸಿ ಹೊಸ ದಾಖಲೆಯನ್ನ ಸೃಷ್ಟಿಸಿದ್ದಾರೆ.
ಬಿಎಂಟಿಸಿ ಯಪಿಐ ಮೂಲಕ ಪ್ರತಿ ತಿಂಗಳಿಗೆ 8 ರಿಂದ 10 ಕೋಟಿ ಕಲೆಕ್ಷನ್ ಮಾಡುತ್ತಿತ್ತು. ಆದರೆ, ಕಳೆದ ಮೂರು ದಿನಗಳಿಂದ ಪ್ರತಿದಿನ ಯುಪಿಐ ಟಿಕೆಟ್ ಪಡೆಯುವ ಮೂಲಕ ಒಂದು ಕೋಟಿ ಆದಾಯ ಬಿಎಂಟಿಸಿಗೆ ಬರುತ್ತಿದೆ. ಒಂದೇ ದಿನದಲ್ಲಿ ಆನ್‌ಲೈನ್ ಟಿಕೆಟ್ ಪಡೆಯುವ ಮೂಲಕ ಒಂದು ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದ ಬಿಎಂಟಿಸಿ ಮೂರೂ ಸಾರಿಗೆ ನಿಗಮಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಜೊತೆಗೆ ಕಂಡಕ್ಟರ್‌ಗಳಿಗೆ ತಲೆಬಿಸಿಯಾಗಿದ್ದ ಚಿಲ್ಲರೆ ಸಮಸ್ಯೆಗೂ ಮುಕ್ತಿಸಿಕ್ಕಿದ್ದು, ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ಕಿರಿಕ್ ಯುಪಿಐನಿಂದ ಬ್ರೇಕ್ ಬಿದ್ದಂತಾಗಿದೆ.