ಕರ್ನಾಟಕ

ಕಾರು ಅಡ್ಡಗಟ್ಟಿ ಕೋಟಿ ದೋಚಿದ ಖದೀಮರು..! ಎಲ್ಲಿ ಗೊತ್ತಾ..?

ಇಂದು ಬೆಳಗಿನ ಜಾವ ಕಾರು ಅಡ್ಡಗಟ್ಟಿ 350 ಕೆ.ಜಿ ಬೆಳ್ಳಿ ಗಟ್ಟಿಗಳು,1 ಕೋಟಿ ಹಣ ದರೋಡೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್‌ ಮಹದೇವ್‌ ಗೆ ಸೇರಿದ ಹಣ ಮತ್ತು ಬೆಳ್ಳಿ ಕಳವಾಗಿದೆ.

ಮಾರ್ವಾಡಿಗಳ ಕಾರು ಅಟ್ಟಗಟ್ಟಿ ಕಳ್ಳರು ಒಂದು ಕೋಟಿ ಹಣ ದೋಚಿ ಪರಾರಿಯಾಗಿರುವ ಘಟನೆ, ತುಮಕೂರು ತಾಲೂಕಿನ ನೆಲಹಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

ಇಂದು ಬೆಳಗಿನ ಜಾವ ಕಾರು ಅಡ್ಡಗಟ್ಟಿ 350 ಕೆ.ಜಿ ಬೆಳ್ಳಿ ಗಟ್ಟಿಗಳು,1 ಕೋಟಿ ಹಣ ದರೋಡೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್‌ ಮಹದೇವ್‌ ಗೆ ಸೇರಿದ ಹಣ ಮತ್ತು ಬೆಳ್ಳಿ ಕಳವಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದಾಗ, ಅನಿಲ್‌ ಅವರ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್‌, ವಿನೋದ್‌ ಜತೆಯಲ್ಲಿದ್ದರು ಎನ್ನಲಾಗುತ್ತಿದೆ. ನೆಲಹಾಳ್ ಬಳಿ ಮೂರು ಕಾರುಗಳಲ್ಲಿ ಬಂದ ಏಳೆಂಟು ಕಳ್ಳರು ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ತಕ್ಷಣ ಕಾರಿನಿಂದ ಇಳಿದು ಬಾಲಾಜಿ, ಗಣೇಶ್‌, ವಿನೋದ್‌ ಕಳ್ಳರಿಂದ ಎಸ್ಕೇಪ್‌ ಆಗಿದ್ದಾರೆ. ಅನಿಲ್‌ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದ ಕಳ್ಳರು ಸ್ವಲ್ಪ ದೂರ ಕರೆದೊಯ್ದು, ಕೋರ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜೇನಹಳ್ಳಿ ಬಳಿ ಅನಿಲ್‌ ಮತ್ತು ಕಾರನ್ನು ಬಿಟ್ಟು ಪರಾರಿಯಾದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗೆ ಇಳಿದಿದ್ದಾರೆ.