ವೈರಲ್

ನ್ಯೂ ಇಯರ್‌ಗೆ 10 ಲಕ್ಷ ಓಯೋ ರೂಂ ಬುಕ್.. ಬರೋಬ್ಬರಿ 400 ಕೋಟಿ ರೂ. ʼಎಣ್ಣೆʼ ಸೇಲ್‌

ನ್ಯೂ ಇಯರ್‌ಗೆ ʼಎಣ್ಣೆʼ ಕಿಕ್‌ ಕೊಟ್ಟಿದ್ರೆ, ಹೊಸ ವರ್ಷಾಚರಣೆ ವೇಳೆ ಓಯೋಗೂ ಭರ್ಜರಿ ಡಿಮ್ಯಾಂಡ್‌ ಇತ್ತು ಅನ್ನೋದನ್ನ ಕಂಪನಿಯೇ ಹೇಳಿಕೊಂಡಿದೆ. ಒಟ್ಟಾರೆ.. ನ್ಯೂ ಇಯರ್‌ನಲ್ಲಿ ಎಣ್ಣೆ ಮತ್ತು ಓಯೋ ರೂಮ್‌ಗಳು ಭರ್ಜರಿ ಬ್ಯುಸಿನೆಸ್‌ ಅಂತೂ ಮಾಡಿವೆ.

ನ್ಯೂ ಇಯರ್ ಅಂದ್ರೇ ಮೊದಲು ನೆನಪಾಗೋದೇ ಎಣ್ಣೆ. ಆದ್ರೆ ಈ ಸಲ ಓಯೋ ರೂಮ್ಸ್ ಕೂಡಾ ನೆನಪಾಗ್ತಾ ಇದೆ. ಈ ಬಾರಿ ಹೊಸ ವರ್ಷಕ್ಕೆ 400 ಕೋಟಿ ರೂಪಾಯಿಯಷ್ಟು ಎಣ್ಣೆ ಸೇಲ್ ಆಗಿ ಸರ್ಕಾರಕ ಬೊಕ್ಕಸವನ್ನ ಎಣ್ಣೇಲೇ ತೇಲಿಸಿದ್ದಾರೆ ನಮ್ ಮಂದಿ. ಇದೆಲ್ಲಾ ಮದ್ಯಪ್ರಿಯರ ವಿಷ್ಯ ಆದ್ರೆ. oye ರೂಮ್‌ ಪ್ರಿಯರೂ ಜಾಲಿ.. ಜಾಲಿ ಎಂದಿದ್ದಾರೆ.  ಮದಿರೆಯ ಮತ್ತಿನ ಮಧ್ಯೆ ಬಹುತೇಕರ ಹಾಟ್‌ ಫೇವರಿಟ್‌ ಅಂತಾನೇ ಕರೆಸಿಕೊಳ್ಳುವ ಓಯೋ ರೂಮ್‌ ಬುಕ್ಕಿಂಗ್‌ ಕೂಡ ಫುಲ್‌ ಬ್ಯುಸಿನೆಸ್‌ ಮಾಡಿದೆ. ಓಯೋ ಬ್ಯುಸಿನೆಸ್‌ ಏನು ಅಂತಾ ನಿಮಗೆಲ್ಲಾ ಗೊತ್ತೇ ಇದೆ. ಹೋಟೆಲ್‌ ರೂಮ್‌ ಬುಕಿಂಗ್‌ಗೆ ಅಂತಾನೇ ಇರೋ ಫ್ಲಾಟ್‌ಫಾರ್ಮ್‌. ಇಂಥಾ ವೆಬ್‌ಸೈಟ್‌ನಲ್ಲಿ ಪ್ರತಿ ನಿಮಿಷಕ್ಕೆ 768 OYO ರೂಮ್ ಬುಕ್ ಮಾಡಿ ದಾಖಲೆ ಬರ್ದಿದ್ದಾರೆ ನಮ್ ಜನ. ಇದನ್ನ ನಾವ್ ಹೇಳ್ತಿಲ್ಲ. ಓಯೊ ಕಂಪನಿನೇ ಹೇಳ್ತಿದೆ. ಒಟ್ಟು 10 ಲಕ್ಷ ಓಯೋ ರೂಂ ಬುಕ್ ಆಗಿದೆ ಅಂತೆ. ನ್ಯೂ ಇಯರ್‌ಗೆ ʼಎಣ್ಣೆʼ ಕಿಕ್‌ ಕೊಟ್ಟಿದ್ರೆ, ಹೊಸ ವರ್ಷಾಚರಣೆ ವೇಳೆ ಓಯೋಗೂ ಭರ್ಜರಿ ಡಿಮ್ಯಾಂಡ್‌ ಇತ್ತು ಅನ್ನೋದನ್ನ ಕಂಪನಿಯೇ ಹೇಳಿಕೊಂಡಿದೆ. ಒಟ್ಟಾರೆ.. ನ್ಯೂ ಇಯರ್‌ನಲ್ಲಿ ಎಣ್ಣೆ ಮತ್ತು ಓಯೋ ರೂಮ್‌ಗಳು ಭರ್ಜರಿ ಬ್ಯುಸಿನೆಸ್‌ ಅಂತೂ ಮಾಡಿವೆ.