ಸ್ವೀಡನ್ : ಶಾಲೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಸಾವನ್ನಪ್ಪಿರುವ ಘಟನೆ ಸ್ವೀಡನ್‌ನ ಒರೆಬ್ರೊ ನಗರದ ಶಾಲೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ರೆ, ಐವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಾಳಿಕೋರರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ.
ಸುರಕ್ಷಿತ ನಗರವೆಂದು ಕರೆಸಿಕೊಳ್ಳುತ್ತಿದ್ದ ಸ್ವೀಡನ್ನಲ್ಲೇ ಗುಂಡಿನ ಮೊರೆತ ಕೇಳಿದ್ದು, ಸಾರ್ವಜನಿಕರು ಆಘಾತಕ್ಕೊಳಗಾಗಿದ್ದಾರೆ. ಇನ್ನೂ ಓರ್ವ ದಷ್ಕರ್ಮಿಯಿಂದಲೇ ಈ ಘಟನೆ ನಡೆದಿದ್ದು, ಇದರಲ್ಲಿ ಭಯೋತ್ಪಾಧಕರ ಕೈವಾಡ ಕಂಡುಬಂದಿಲ್ಲ. ಸ್ವೀಡಷ್ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಗುಂಡಿನ ದಾಳಿ ಎಂದು ಪ್ರಧಾನಿ ಉಲ್ಫ್ ಕ್ರಿಸ್ಟಿರ್ಸನ್ ಹೇಳಿದ್ದಾರೆ. ಹಾಗಾಗಿ ಶಾಲೆಯ ಸುತ್ತಾಮುತ್ತಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಘಟನಾ ಸ್ಥಳದಿಂದ ದೂರವಿರುವಂತೆ ಮನವಿ ಮಾಡಲಾಗಿದೆ.