ಮಂಡ್ಯ : ಕಾವೇರಿ ಐದನೇ ಹಂತದ ಯೋಜನೆಯನ್ನು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡಿದ್ದು, ಮೇಕೆದಾಟುಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಮಂಡ್ಯದಲ್ಲಿ ಹೆಚ್ಡಿಕೆ ಕೇಂದ್ರದಿಂದ ಅನುಮತಿ ಕೊಡಿಸಲಿ. ಆ ಯೋಜನೆಯನ್ನೂ ಮಾಡ್ತೀವಿ. ಮೇಕೆದಾಟು ಮಾಡೋದ್ರಿಂದ ತಮಿಳುನಾಡಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಆದ್ರೂ ರಾಜಕೀಯಕ್ಕಾಗಿ ತಮಿಳುನಾಡು ಕ್ಯಾತೆ ತಗೆದಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದ್ರೆ ಈ ಯೋಜನೆ ಸಾಧ್ಯವಾಗುತ್ತದೆ. ಕೇಂದ್ರದ ಮಂತ್ರಿಗಳು ಈ ಕೆಲಸ ಮಾಡಲಿ ಎಂದು ಸಿಎಂ ಹೇಳಿದ್ದಾರೆ.

ಈ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರದಿಂದ ಕರ್ನಾಟಕದ ನಿರಂತರ ಮಲತಾಯಿ ಧೋರಣೆ ಆಗಿದೆ. ತೆರಿಗೆಯ ಪಾಲು ಕೂಡ ಸಮರ್ಪಕವಾಗಿ ಕೊಡುತ್ತಿಲ್ಲ.ಉತ್ತರಪ್ರದೇಶ, ಮಧ್ಯಪ್ರದೇಶಕ್ಕೆ ಹೆಚ್ಚಿನ ತೆರಿಗೆ ಪಾಲು ಸಿಕ್ತಿದೆ. ಕರ್ನಾಟಕಕ್ಕೆ ನ್ಯಾಯಯುತವಾಗಿ ಕೊಡಬೇಕಾದ ಹಣಕಾಸು ಕೊಡ್ತಿಲ್ಲ. ಮಹದಾಯಿಗೆ, ಕೃಷ್ಣಾಗೆ ಇದವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ಇದು ಕೇಂದ್ರ ಕರ್ನಾಟಕಕ್ಕೆ ಮಾಡ್ತಿರೋ ಅನ್ಯಾಯ. ಒಬ್ಬ ಜೆಡಿಎಸ್, ಬಿಜೆಪಿ ಎಂಪಿ ಬಾಯಿ ಬಿಡಲ್ಲ. ಕರ್ನಾಟಕವನ್ನ ಆರ್ಥಿಕ, ಸಾಮಾಜಿಕವಾಗಿ ಸದೃಢ ಮಾಡ್ತಿರೋದನ್ನ ಸಹಿಸಲು ಆಗ್ತಿಲ್ಲ ಅವರಿಗೆ. ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ ಮುಂದಿದೆ. ನಾವು ಉತ್ತಮ ಆಡಳಿತ ಮಾಡ್ತಿದ್ದೇವೆ. GST ಸಂಗ್ರಹದಲ್ಲಿ ನಮ್ಮದು ಎರಡನೇ ಸ್ಥಾನ ಇದೆ. ಆದ್ರೆ ನಮಗೆ ವಾಪಸ್ಸು ಬರ್ತಿರೋದು 60 ಸಾವಿರ ಕೋಟಿ ಮಾತ್ರ. 100 ಪೈಸೆಯಲ್ಲಿ 15 ಪೈಸೆ ಮಾತ್ರ ವಾಪಸ್ ಬರ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.