ಜೋತಿಷ್ಯ

13/12/2024 : ಶುಕ್ರವಾರ; ಈ ರಾಶಿಯವರು ಇಂದು ಅಂದುಕೊಂಡ ಕೆಲಸಗಳು ಆಗುವುದಿಲ್ಲ

ಮನುಷ್ಯನ ದೈನಂದಿನ ಜೀವನದ ಮೇಲೆ ನಿತ್ಯ 12 ಜ್ಯೋತಿಷ್ಯ ರಾಶಿಗಳು ಮನುಷ್ಯನ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಮೇಶರಾಶಿಯಿಂದ ಮೀನ ರಾಶಿಯ ವರೆಗಿನ ಈ ದಿನದ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

ಮೇಷ ರಾಶಿ
ಈ ದಿನ ನಿಮಗೆ ಬಿಡುವಿಲ್ಲದ ಕೆಲಸವಿರುತ್ತದೆ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ. ಈ ದಿನ ನೀವು ಅಂದುಕೊಂಡಿದ್ದಂತ ಕೆಲಸ ಆಗದೆ ಇರಬಹುದು, ತಾಳ್ಮೆಯಿಂದಿರಿ.

ವೃಷಭ ರಾಶಿ
ಇಂದು ನಿಮಗೆ ಮಂಗಳಕರ ದಿನವಾಗಿದ್ದು ಪ್ರತಿಯೊಂದು ಕೆಲಸದಲ್ಲೂ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರರನ್ನ ಪಡೆಯುತ್ತಿರಾ.

ಮಿಥುನ
ಇಂದು ನಿಮಗೆ ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಲವು ವಿಷಯಗಳಲ್ಲಿ ನೀವು ಸ್ನೇಹಿತರ ಸಹಾಯವನ್ನು ಪಡೆಯಬೇಕಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ, ಕಾಳಜಿ ವಹಿಸಬೇಕು. ಅತಿಥಿಗಳು ಮನೆಗೆ ಬರುವುದರಿಂದ ನಿಮ್ಮ ಖರ್ಚು ಕೂಡ ಹೆಚ್ಚಾಗಬಹುದು.

ಕರ್ಕಾಟಕ ರಾಶಿ
ಇಂದು ನಿಮ್ಮ ಎಲ್ಲಾ ವಿಷಯಗಳಲ್ಲಿ ಮಂಗಳಕರವಾಗಿರುತ್ತದೆ. ಇಂದು ನಿಮ್ಮ ಹಣವನ್ನು ಇತರರಿಗೆ ಖರ್ಚು ಮಾಡಬಹುದು. ನಿಮ್ಮ ಮಕ್ಕಳ ಕಡೆಯಿಂದ ಸಂತೋಷದಾಯಕ ಸುದ್ದಿ ಕೇಳಲಿದ್ದೀರಿ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಖುಷಿಯ ವಾತಾವರಣವಿರುತ್ತದೆ.

ಸಿಂಹ ರಾಶಿ
ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ ಮತ್ತು ಅದೃಷ್ಯವನ್ನು ನೀಡುತ್ತದೆ. ಶುಭ ಲಗ್ನದಲ್ಲಿ ಬುಧನ ಉಪಸ್ಥಿತಿಯಿಂದಾಗಿ, ಕೆಲಸದ ಸ್ಥಳದಲ್ಲಿ ಬದಲಾವಣೆಯಾಗುತ್ತದೆ ಮತ್ತು ನಿಮಗೆ ಅದೃಷ್ಟದ ಆಶೀರ್ವಾದ ದೊರೆಯುತ್ತದೆ.

ಕನ್ಯಾ ರಾಶಿ
ಇಂದು ನಿಮಗೆ ಅದೃಷ್ಟದ ದಿನವಾಗಿರುತ್ತದೆ. ನಿಮ್ಮ ದಿನವನ್ನು ಉತ್ತಮ ಧಾರ್ಮಿಕ ಕಾರ್ಯಗಳಲ್ಲಿ ಕಳೆಯುತ್ತಿರಾ. ಇಂದು ಇತರರಿಗೆ ಸಹಾಯ ಮಾಡಲು ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ.

ತುಲಾ ರಾಶಿ
ಇಂದು ನಿಮ್ಮ ಕುಟುಂಬದಲ್ಲಿ ಸಂತೋಷದ ದಿನವಾಗಿರುತ್ತದೆ ಮತ್ತು ನಿಮ್ಮ ಮನಸ್ಸಿನಲ್ಲಿ ನೆಮ್ಮದಿ ಇರುತ್ತದೆ. ಇಂದು ನಿಮ್ಮ ಸಂತೋಷ ಮತ್ತು ಸೌಂದರ್ಯ ಹೆಚ್ಚಾಗುತ್ತದೆ ಮತ್ತು ಸ್ನೇಹಿತರೊಂದಿಗಿನ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ.

ವೃಶ್ಚಿಕ ರಾಶಿ
ಇಂದು ನಿಮಗೆ ಸಮೃದ್ಧಿಯ ದಿನ. ಇಂದು ನೀವು ಇತರರ ಕೆಲಸಕ್ಕೆ ಕೊಡುಗೆ ನೀಡಲು ಮುಂದಾಗಿರುತ್ತೀರಿ. ಕುಟುಂಬ ಸದಸ್ಯರಿಗಾಗಿ ಇಂದು ನಿಮ್ಮ ಮನೆಯಲ್ಲಿ ಪಾರ್ಟಿಯನ್ನು ಆಯೋಜಿಸಬಹುದು.

ಧನು ರಾಶಿ
ಇಂದು ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷವಿರುತ್ತದೆ. ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಲು ಪ್ರಯತ್ನಿಸಿ ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಕುಟುಂಬ ಸದಸ್ಯರ ಸಹಾಯದಿಂದ ಪೂರ್ಣಗೊಳ್ಳುತ್ತದೆ.

ಮಕರ ರಾಶಿ
ಇಂದು ನಿಮಗೆ ಬಿಡುವಿಲ್ಲದ ದಿನವಾಗಬಹುದು. ವ್ಯಾಪಾರ ವ್ಯವಹಾರಕ್ಕೆ ಗಮನ ಕೊಡುವುದು ನಿಮ್ಮ ಆದ್ಯತೆಯಾಗಿರಬೇಕು. ಇಂದು ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಬೇಕು.

ಕುಂಭ
ಇಂದು ನಿಮಗೆ ಶುಭಕರವಾಗಿರುತ್ತದೆ ಮತ್ತು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ಸಂಪತ್ತು ಮತ್ತು ಖ್ಯಾತಿಯ ಲಾಭ ಇರುತ್ತದೆ, ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷದ ದಿನ

ಮೀನ
ಇಂದು ನಿಮಗೆ ಶುಭ ದಿನವಾಗಿದ್ದು, ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಾಗುವುದು. ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಮತ್ತು ಹತ್ತಿರದ ಪ್ರಯಾಣ ಸಾಧ್ಯ ನೀವು ರಾತ್ರಿಯ ಸ್ವಲ್ಪ ಸಮಯವನ್ನು ಕುಟುಂಬದೊಂದಿಗೆ ಕಳೆದರೆ ಒಳ್ಳೆಯದು.