144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಇದೇ ತಿಂಗಳ 13ರಂದು ಚಾಲನೆ ಸಿಕ್ಕಿದೆ.. ವಿಶ್ವದಲ್ಲಿಯೇ ಅತೀದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ಬರೀ 15 ದಿನಗಳಲ್ಲಿ 15 ಕೋಟಿ ಜನರು ಭಾಗಿಯಾಗಿದ್ದಾರೆ.. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮ ಸ್ಥಳದಲ್ಲಿ ಕೋಟ್ಯಂತರ ಜನರು ಮಿಂದೆದ್ದಿದ್ದಾರೆ.. ಜನವರಿ 13ರಿಂದ ಮಹಾ ಕುಂಭಮೇಳ ಪ್ರಾರಂಭವಾಗಿದ್ದು, ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದೆ.. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿನ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಧು-ಸಂತರು, ಅಘೋರಿಗಳು, ನಾಗಾಸಾಧುಗಳು ಸೇರಿ ಸನ್ಯಾಸಿಗಳ ದಂಡೇ ಹರಿದು ಬಂದಿದೆ.. ದೇಶದ ನಾನಾ ಭಾಗಗಳ ಭಕ್ತರು ಮಾತ್ರವಲ್ಲದೇ ವಿದೇಶದಿಂದಲೂ ಗಣ್ಯರು ಆಗಮಿಸುತ್ತಿದ್ದಾರೆ.. ಒಟ್ಟಾರೆ ಈ ಬಾರಿ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನಕ್ಕಾಗಿ ಬರೋಬ್ಬರಿ 45 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ..