ಜೋತಿಷ್ಯ

19/11/2024 : ಮಗಳವಾರ: ಈ ರಾಶಿಯವರು ಎಚ್ಚರವಾಗಿರಿ..ಸೋಮಾರಿಯಾದ್ರೆ ಎಲ್ಲವೂ ಉಲ್ಟಾ..!

19/11/2024 ಗ್ರಹಗಳ ಸಂಚಾರದಿಂದಾಗಿ, ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಯವರಿಗೆ ಈ ದಿನ ಹೇಗಿರಲಿದೆ ಎನ್ನುವುದನ್ನು ಇಂದಿನ ರಾಶಿ ಭವಿಷ್ಯ ನಿಮಗೆ ತಿಳಿಸುತ್ತದೆ.

ಮೇಷ ರಾಶಿ
ಮೇಷ ರಾಶಿಗೆ ಸೇರಿದ ಜನರಿಗೆ ಈ ದಿನ ಸಾಮಾನ್ಯವಾಗಿರಲಿದೆ. ಈ ದಿನ ನೀವು ಮನೆಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವುದರಿಂದ ಮನಸ್ಸು ಸಂತೋಷವಾಗಿರುವುದು. ಮನೆಯ ಸದಸ್ಯರೊಂದಿಗೆ ಯಾವುದಾದರೂ ವಿಷಯಕ್ಕಾಗಿ ವಿವಾದ ಉಂಟಾಗಿದ್ದರೆ ಅದು ಈ ದಿನ ಕೊನೆಗೊಳ್ಳಲಿದೆ.

ವೃಷಭ ರಾಶಿ
ಇಂದು ರಾಜಕೀಯಕ್ಕೆ ಸಂಬಂಧಿಸಿದ ವೃಷಭ ರಾಶಿಗೆ ಸೇರಿದ ಜನರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸು ಕಾಣುವರು. ಇದರಿಂದಾಗಿ ರಾಜಕೀಯದಲ್ಲಿ ನಿಮಗೆ ಉತ್ತಮ ಸ್ಥಾನ ದೊರಕುವ ಅವಕಾಶ ಲಭಿಸುವುದು ಮತ್ತು ನಿಮಗೆ ಜನರ ಬೆಂಬಲ ದೊರಕುವುದು. ಇಂದು ನಿಮ್ಮ ತಾಯಿಯ ಆರೋಗ್ಯದಲ್ಲಿ ಕೆಲವು ಏರಿಳಿತ ಉಂಟಾಗುವ ಸಾಧ್ಯತೆ ಇದೆ. 

ಮಿಥುನ ರಾಶಿ
ಇಂದು ಮಿಥುನ ರಾಶಿಗೆ ಸೇರಿದ ಜನರು ತಮ್ಮ ಕೆಲಸದ ಸ್ಥಳದಲ್ಲಿ ಸಂತೋಷವನ್ನು ಹೊಂದುವರು. ಈ ಮೊದಲು ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಯಾವುದಾದರೂ ವಿಷಯಕ್ಕೆ ಮನಸ್ತಾಪ ಉಂಟಾಗಿದ್ದರೆ, ಅದು ಈ ದಿನ ದೂರವಾಗುವುದು. ಇಂದು ನಿಮ್ಮ ಮೋಜು ಮಸ್ತಿಯ ಸ್ವಭಾವದಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದಿರಿ.

ಕಟಕ ರಾಶಿ
ಇಂದು ಕಟಕ ರಾಶಿಗೆ ಸೇರಿದ ಜನರಿಗೆ ಸಾಮಾನ್ಯವಾಗಿರಲಿದೆ. ಈ ದಿನ ಕೆಲವು ಸಮಯ ನೀವು ಸ್ನೇಹಿತರೊಂದಿಗೆ ಕಳೆಯುವಿರಿ. ಇಂದು ನೀವು ಸ್ನೇಹಿತರೊಂದಿಗೆ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಈ ದಿನ ಸಾಮಾಜಿಕ ಕಾರ್ಯಗಳಲ್ಲಿ ನೀವು ಹೆಚ್ಚಾಗಿ ತೊಡಗಿ ಕೊಳ್ಳುವಿರಿ. ಇಂದು ನಿಮ್ಮ ಗೌರವ, ಖ್ಯಾತಿ ಹಾಗೂ ಪ್ರತಿಷ್ಠೆಯಲ್ಲಿ ಸಾಕಷ್ಟು ವೃದ್ಧಿಯನ್ನು ಕಾಣುವಿರಿ.

ಸಿಂಹ ರಾಶಿ
ಇಂದು ಸಿಂಹ ರಾಶಿಗೆ ಸೇರಿದ ವ್ಯಾಪಾರವನ್ನು ಮಾಡುವ ಜನರ ಹೊಸ ಯೋಜನೆಯನ್ನು ಶುರು ಮಾಡಬಹುದಾಗಿದೆ. ನೀವು ಬೇರೆಯವರ ಸಲಹೆಯನ್ನು ಪಡೆದು ಯಾವುದೇ ಕೆಲಸವನ್ನು ಮಾಡಬೇಡಿ. ನೀವೇನಾದರೂ ಹಾಗೆ ಮಾಡಿದರೆ ನಿಮಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. 

ಕನ್ಯಾ ರಾಶಿ
ಕನ್ಯಾ ರಾಶಿಗೆ ಸೇರಿದ ಜನರಿಗೆ ಈ ದಿನವು ಶುಭ ಕಾರ್ಯಗಳಲ್ಲಿ ವೃದ್ದಿಯಾಗಲಿದೆ. ಕೆಲಸವನ್ನು ಹುಡುಕುತ್ತಿರುವ ಕನ್ಯಾ ರಾಶಿ ಸೇರಿದ ಜನರಿಗೆ ಇಂದು ಉತ್ತಮ ಅವಕಾಶಗಳ ಪ್ರಾಪ್ತಿಯಾಗುವುದು. ಇಂದು ನಿಮ್ಮ ಅಗತ್ಯಗಳನ್ನು ಪೂರೈಸಲು ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಸಂಪಾದನೆ ಮಾಡುವಿರಿ. 

ತುಲಾ ರಾಶಿ
ತುಲಾ ರಾಶಿಗೆ ಸೇರಿದ ಜನರಿಗೆ ಇಂದು ಸಕಾರಾತ್ಮಕ ಫಲಿತಾಂಶ ದೊರಕುವುದು. ಕೆಲವು ದಿನಗಳಿಂದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿದ್ದರೆ ಇಂದು ಎಲ್ಲಾ ಸಮಸ್ಯೆಗಳು ದೂರವಾಗುವುದು. ಜೊತೆಗೆ ಇಂದು ನೀವು ಕಳೆದು ಹೋದ ಹಣವನ್ನು ವಾಪಸ್ಸು ಪಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಇಂದು ಸಾಮಾನ್ಯವಾಗಿರಲಿದೆ. ಇಂದು ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ. ಏಕೆಂದರೆ ನಿಮ್ಮ ಅಪೂರ್ಣ ವ್ಯವಹಾರಗಳಿಂದಾಗಿ ಮನೆಯ ಸದಸ್ಯರು ತೊಂದರೆಯನ್ನು ಎದುರಿಸಬೇಕಾದ ಸಾಧ್ಯತೆ ಇದೆ. ನೀವು ನಿಮ್ಮ ವ್ಯಾಪಾರಕ್ಕಾಗಿ ಯಾರಿಂದಲಾದರೂ ಸಾಲವನ್ನು ಪಡೆಯುವ ಬಗ್ಗೆ ಯೋಚಿಸುತಿದ್ದರೆ, ಸ್ವಲ್ಪ ಸಮಯ ಕಾಯುವುದು ಉತ್ತಮ.

ಧನು ರಾಶಿ
ಧನು ರಾಶಿಗೆ ಸೇರಿದ ಜನರಿಗೆ ಇಂದು ದೊಡ್ಡ ಯಶಸ್ಸು ಲಭಿಸಲಿದೆ. ಇಂದು ನಿಮ್ಮ ವಿರೋಧಿಗಳು ನಿಮ್ಮ ಪ್ರಗತಿಯನ್ನು ನೋಡಿ ನಿಮ್ಮನ್ನು ಹೊಗಳುವರು. ಇದರಿಂದಾಗಿ ನೀವು ಆಶ್ಚರ್ಯವನ್ನು ಹೊಂದುವಿರಿ. ಈ ದಿನ ನೀವು ನಿಮ್ಮ ಶತ್ರುಗಳನ್ನು ಗುರುತಿಸುವುದು ಉತ್ತಮ. 

ಮಕರ ರಾಶಿ
ಇಂದು ಮಕರ ರಾಶಿಗೆ ಸೇರಿದ ಜನರಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮ ದಿನವಾಗಿರಲಿದೆ. ಇಂದು ನೀವು ಮಾಡಿದಂತಹ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ದೊರಕುವುದು. ಆದರೆ ನೀವು ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಪಾಲುದಾರರ ಸಲಹೆ ಪಡೆಯುವುದು ಉತ್ತಮ.

ಕುಂಭ ರಾಶಿ
ಇಂದು ಕುಂಭ ರಾಶಿಗೆ ಸೇರಿದ ಜನರ ಪ್ರಭಾವ ಮತ್ತು ವೈಭವ ಹೆಚ್ಚಾಗಲಿದೆ. ಇಂದು ಯಾವುದಾದರು ಶತ್ರುಗಳ ಕಾರಣದಿಂದಾಗಿ ವ್ಯಾಪಾರದಲ್ಲಿ ನಿಮಗೆ ನಷ್ಟವಾಗಬಹುದು. ಆದರೆ ಚಿಂತೆಗೆ ಒಳಗಾಗಬೇಡಿ. ಏಕೆಂದರೆ ನಿಮ್ಮ ಖರ್ಚುಗಳನ್ನು ಪೂರೈಸುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. 

ಮೀನ ರಾಶಿ
ಮೀನ ರಾಶಿಗೆ ಸೇರಿದ ಜನರಿಗೆ ಇಂದು ಮಿಶ್ರಫಲ ದೊರಕಲಿದೆ. ಇಂದು ನೀವು ಯಾರಿಗಾದರೂ ಹಣವನ್ನು ನೀಡಬೇಕೆಂದಿದ್ದರೆ ಅದು ವಾಪಸ್ಸು ನಿಮ್ಮ ಕೈ ಸೇರುವ ಸಂಭವ ಕಡಿಮೆಯಿದೆ. ಹಣಕ್ಕೆ ಸಂಬಂಧಿಸಿದ ವಹಿವಾಟಿನಲ್ಲಿ ನಿಮ್ಮ ಸಂಗಾತಿಯ ಸಲಹೆಯನ್ನು ಪಡೆಯುವುದು ಉತ್ತಮ.