ಕರ್ನಾಟಕ

ಕಲ್ಪತರು ನಾಡಲ್ಲಿ ಇಂದಿನಿಂದ 2 ದಿನ ಅದ್ದೂರಿ ದಸರಾ ಕಾರ್ಯಕ್ರಮ; ಪೊಲೀಸ್ ಇಲಾಖೆ ಹೈ ಅಲರ್ಟ್​

ಖ್ಯಾತ ಗಾಯಕರಿಂದ ಸಂಗೀತ ರಸಸಂಜೆ ಇರಲಿದೆ. ಜೊತೆಗೆ ವಸ್ತುಪ್ರದರ್ಶನ, ಕಾರ್ ಶೋ, ಮ್ಯಾರಥಾನ್, ದಸರಾ ಮೆರವಣಿಗೆ ಹಿನ್ನೆಲೆ ತುಮಕೂರಿನಲ್ಲಿ ಪೊಲೀಸ್ ಇಲಾಖೆ ಫುಲ್ ಅಲರ್ಟ್​ ಆಗಿದ್ದಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕಿಂಗ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ತುಮಕೂರು : ಇಂದಿನಿಂದ ತುಮಕೂರಿನಲ್ಲಿ ಎರಡು ದಿನ ಅದ್ದೂರಿ ದಸರಾ ಕಾರ್ಯಕ್ರಮ ಹಿನ್ನೆಲೆ ದಸರಾ ಆಚರಣೆಗೆ ಪೊಲೀಸರು ಬಿಗಿಭದ್ರತೆಯನ್ನ ಒದಗಿಸಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತಿದ್ದು, ಮೈಸೂರು ಮಾದರಿಯಲ್ಲಿ ತುಮಕೂರು ದಸರಾ ಆಚರಿಸಲಾಗುತ್ತಿದೆ. 

ಎರಡು ದಿನ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. 

ಖ್ಯಾತ ಗಾಯಕರಿಂದ ಸಂಗೀತ ರಸಸಂಜೆ ಇರಲಿದೆ. ಜೊತೆಗೆ ವಸ್ತುಪ್ರದರ್ಶನ, ಕಾರ್ ಶೋ, ಮ್ಯಾರಥಾನ್, ದಸರಾ ಮೆರವಣಿಗೆ ಹಿನ್ನೆಲೆ ತುಮಕೂರಿನಲ್ಲಿ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದ್ದಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕಿಂಗ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. 

ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಮಾಹಿತಿ ನೀಡಿದ್ದು, ಕಾರ್ಯಕ್ರಮಕ್ಕೆ ಭಾಗಿಯಾಗುವ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಒಟ್ಟು 10 ಕಡೆ ಪಾರ್ಕಿಂಗ್ ವ್ಯವಸ್ಥೆ ಇದ್ದು, ಕಾರ್ಯಕ್ರಮದ ನಡೆಯುವ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಗಾಂಧಿ ಸ್ಮಾರಕದ ಬಳಿವಿವಿಐಪಿ ಹಾಗೂ ವಿಐಪಿ ಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 

ಡಿಡಿಪಿಐ ಕಚೇರಿ ಆವರಣ, ರೈಲ್ವೆ ನಿಲ್ದಾಣ ಬ್ರಿಡ್ಜ್ ಬಳಿ, ಉಪ್ಪಾರಹಳ್ಳಿ ಬ್ರಿಡ್ಜ್ ನಿಂದ ರೈಲ್ವೆ ಸ್ಟೇಷನ್ ರಸ್ತೆ, ಭಾರತ್ ಮಾತಾ ಸ್ಕೂಲ್ ಮೈದಾನ, ಎಂಪ್ರೆಸ್ ಕಾಲೇಜು ಮೈದಾನ, ಬಿಷಾಪ್ ಸರ್ಜೆಂಟ್ ಸ್ಕೂಲ್ ಮೈದಾನ, ಎನ್ಇಪಿಎಸ್ ಸ್ಟೇಷನ್ ಎದುರಿನ ಖಾಲಿ ಆವರಣ, ಚಾಮುಂಡೇಶ್ವರಿ ದೇವಸ್ಥಾದ ರಸ್ತೆ, ಸರ್ವೋದಯ ಶಾಲಾ ಮೈದಾನ, ಹೆಲ್ತ್ ಕ್ಯಾಂಟೀನ್ ರೋಡ್, ಹಾಗೂ ಹಳೆ ಕೆಎಸ್ಆರ್ ಟಿಸಿ ನಿಲ್ದಾಣದಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.