ಕಲಬುರಗಿ : ಕಾರ್ ಒಂದು ಬೈಕ್ ಗೆ ಡಿಕ್ಕಿಯಾಗಿ ಮತ್ತೆರಡು ಕಾರ್ ಗಳು ಡಿಕ್ಕಿಯಾದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಕಲಬುರಗಿ ಜಿಲ್ಲೆಯ ಅವರಾದ್ ಗ್ರಾಮದಲ್ಲಿ ನಡೆದಿದೆ. ರವಿ, ಅಂಬರೀಶ್, ಮಲ್ಲಿಕಾರ್ಜುನ ಹಾಗೂ ನರೇಶ್ ಗಾಯಗೊಂಡವರು.
ರಸ್ತೆಯಲ್ಲಿ ಕಾರ್ ಇಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ನಂತರ ಕಾರಿನ ಹಿಂಬದಿಯಿಂದ ಮತ್ತೆರಡು ಕಾರುಗಳು ಡಿಕ್ಕಿ ಹೊಡಿದಿವೆ. ಬೈಕ್ ಸವಾರ ಸೇರಿದಂತೆ, ಕಾರಿನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ, ಗಾಯಾಳುಗಳನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಕಲಬುರಗಿ ಸಂಚಾರಿ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.