ಕರ್ನಾಟಕ

ಸರ್ಕಾರದಿಂದ ಗುಡ್ ನ್ಯೂಸ್..! ಮಹಿಳೆಯರ ಖಾತೆಗೆ ಇದೇ ತಿಂಗಳು ಜಮೆಯಾಗಲಿದೆ 2 ತಿಂಗಳ ಗೃಹಲಕ್ಷಿ ಹಣ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಇದೇ ತಿಂಗಳ 7 ಮತ್ತು 9ರಂದು ಎರಡು ತಿಂಗಳ ಹಣ ಜಮೆ ಆಗುತ್ತೆ. 7ನೇ ತಾರೀಕು ಒಂದು ತಿಂಗಳ ಹಣ. 9ನೇ ತಾರೀಕು ಮತ್ತೊಂದು ತಿಂಗಳ ಹಣ‌ ಜಮೆ ಆಗುತ್ತೆ ಎಂದಿದ್ದಾರೆ.

ಬೆಳಗಾವಿ : ನವರಾತ್ರಿಯಲ್ಲಿ ಮನೆ ಮಹಾಲಕ್ಷಿಯರಿಗೆ ಸಚಿವೆ ಲಕ್ಷಿ ಹೆಬ್ಬಾಳ್ಕರ್ ಗುಡ್ನ್ಯೂಸ್ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬಿಡುಗಡೆಯಾಗದ  ಗೃಹಲಕ್ಷ್ಮಿ ಯೋಜನೆಯ 2 ಕಂತಿನ ಹಣಇದೇ ತಿಂಗಳು ಗೃಹಲಕ್ಷ್ಮಿಯರ ಖಾತೆಗೆ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು,  ಇದೇ ತಿಂಗಳ 7 ಮತ್ತು 9ರಂದು ಎರಡು ತಿಂಗಳ ಹಣ ಜಮೆ ಆಗುತ್ತೆ. 7ನೇ ತಾರೀಕು ಒಂದು ತಿಂಗಳ ಹಣ. 9ನೇ ತಾರೀಕು ಮತ್ತೊಂದು ತಿಂಗಳ ಹಣ‌ ಜಮೆ ಆಗುತ್ತೆ ಎಂದಿದ್ದಾರೆ. 

ಸಿಎಂ ಹಾಗೂ ಡಿಸಿಎಂ ಡಿಕೆಶಿಯವರಿಗೆ ಹಠ ಹಿಡಿದು ಈ ಯೋಜನೆ ಮಾಡಿಸಿದೆ. ಸಿಎಂ ಸಹ ಗೃಹಲಕ್ಷ್ಮಿ ಯೋಜನೆ ಮಾಡಿಸಿದ ಕಿಲಾಡಿ ಹೆಣ್ಣು ಮಗಳು ಅಂತ ನನಗೆ ಕರೀತಾರೆ. ಅಂತಹ ಮನಸಿತ್ತೋ ಕಾಕತಾಳಿವೋಗೊತ್ತಿಲ್ಲ ನನ್ನ ಹೆಸರೂ ಸಹ ಲಕ್ಷ್ಮಿ ಎಂದು ಹೆಬ್ಬಾಳ್ಕರ್ ಸಂತಸವನ್ನ ಹಂಚಿಕೊಂಡಿದ್ದಾರೆ.

ಮನೆ ಮಹಾಲಕ್ಷ್ಮಿಯರಿಗೆ ನಾಲ್ಕು ಸಾವಿರ ಹಣ ಜಮೆ ಆಗುತ್ತೆ. ಮನೆಯಲ್ಲಿ ಹೋಳಿಗೆ ಮಾಡಿ ನನ್ನ ಹೆಸರಿನ ಮೇಲೂ ಒಂದು ತುತ್ತು ಜಾಸ್ತಿ ತಿನ್ನಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೆಳಿದ್ದಾರೆ.