ವೈರಲ್

ಸ್ನಾನಕ್ಕೆಂದು ಸಮುದ್ರಕ್ಕೆ ಇಳಿದ ಯುವಕರು ನೀರುಪಾಲು..!

ಸ್ನಾನ ಮಾಡಲು ಸಮುದ್ರಕ್ಕೆ ಇಳಿದ ಯುವಕರಲ್ಲಿ ಇಬ್ಬರು ನೀರುಪಾಲಾಗಿರುವ ಘಟನೆ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ನಡೆದಿದೆ.

ಸ್ನಾನ ಮಾಡಲು ಸಮುದ್ರಕ್ಕೆ ಇಳಿದ ಯುವಕರಲ್ಲಿ ಇಬ್ಬರು ನೀರುಪಾಲಾಗಿರುವ ಘಟನೆ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ನಡೆದಿದೆ. ಇಂದು ಎಳ್ಳಮಾವಾಸ್ಯೆ ಹಿನ್ನೆಲೆ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಆರು ಜನರ ಯುವಕರು ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದರು, ಈ ಪೈಕಿ ಕಾಪು ತಾಲೂಕಿನ ಹೆಜಮಾಡಿಯ ಅಕ್ಷಯ್‌ ಹಾಗೂ ಚಿರಾಗ್‌ ಅಮೀನ್‌ ಎಂಬುವರು ಸಾವನ್ನಪ್ಪಿದ್ದಾರೆ. 

ಸಮುದ್ರದಲ್ಲಿ ಮುಳುಗುತ್ತಿದ್ದ 6 ಜನರನ್ನು ರಕ್ಷಿಸಲು ಸ್ಥಳೀಯರು ಮುಂದಾಗಿದ್ದರು. ಈ ಪೈಕಿ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದ ಇಬ್ಬರನ್ನು ರಕ್ಷಿಸಲು ಯತ್ನಿಸಿದರೂ ಆ ಪ್ರಯತ್ನ ಫಲಪ್ರದವಾಗಲಿಲ್ಲ. 6 ಯುವಕರಲ್ಲಿ ನಾಲ್ಕು ಜನರನ್ನು ಮಾತ್ರ ಕಾಪಾಡಲು ಸಾಧ್ಯವಾಯಿತು. ಅಮವಾಸ್ಯೆಯಂದೇ ಇಬ್ಬರು ಯುವಕರು ದಾರುಣ ಅಂತ್ಯ ಕಂಡಿದ್ದಾರೆ.