ವೈರಲ್

ದೇವರ ಹೆಸರಲ್ಲಿ ಬಾಡೂಟ, 20 ಮಂದಿ ಅಸ್ವಸ್ಥ..!

ಬುಧವಾರ ತಾಂಡಾದಲ್ಲಿ ದೇವರ ಹೆಸರಲ್ಲಿ ಬಾಡುಟದ ವ್ಯವಸ್ಥೆ ಮಾಡಲಾಗಿತ್ತು, ಇದನ್ನ ಸೇವಿಸಿದ್ದ 20 ಮಂದಿ ವಾಂತಿ,ಭೇದಿಯಿಂದ ಬಳಲಿದ್ದರು.

ಲಿಂಗಸುಗೂರು: ತಾಲ್ಲೂಕಿನ ಗದ್ಲರತಾಂಡಾ ನಿವಾಸಿಗಳಲ್ಲಿ ಇದ್ದಕ್ಕಿದ್ದ ಹಾಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕಲುಷಿತ ಆಹಾರ ಸೇವನೆಯೇ ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಳ್ಳಲು ಕಾರಣ ಎಂದಿದ್ದಾರೆ.

ಬುಧವಾರ ತಾಂಡಾದಲ್ಲಿ ದೇವರ ಹೆಸರಲ್ಲಿ ಬಾಡುಟದ ವ್ಯವಸ್ಥೆ ಮಾಡಲಾಗಿತ್ತು, ಇದನ್ನ ಸೇವಿಸಿದ್ದ 20 ಮಂದಿ ವಾಂತಿ,ಭೇದಿಯಿಂದ ಬಳಲಿದ್ದರು. ಈ ಕುರಿತು ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಪಾಟೀಲ ಮಕಾಪುರ ಅವರು ‘ತಾಂಡಾಕ್ಕೆ ವೈದ್ಯಕೀಯ ತಂಡ ಭೇಟಿ ನೀಡಿ ಪರೀಶಿಲಿಸಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ. ಕಲುಷಿತ ಆಹಾರ ಸೇವನೆಯಿಂದ ವಾಂತಿ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆಹಾರ ಮಾದರಿ ಪಡೆದು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ತಿಳಿಸಿದರು.