ಕರ್ನಾಟಕ

200ನೇ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಸಂಭ್ರಮ..ಕಿತ್ತೂರಿಗೆ ಇಂದು ಸಿಎಂ ಆಗಮನ..!

ಮೂರು ದಿನಗಳ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಭಾಗಿಯಾಗಲಿದ್ದು, ಮೌಢ್ಯತೆಯನ್ನು ತೊಡೆದುಹಾಕಲು ಮುಂದಾಗಿದ್ದಾರೆ.

200ನೇ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಸಂಭ್ರಮ ಹಿನ್ನೆಲೆ, ಇಂದು ಸಿಎಂ ‌ಸಿದ್ಧರಾಮಯ್ಯ ಕಿತ್ತೂರು ಉತ್ಸವಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಭಾಗಿಯಾಗಲಿದ್ದು, ಮೌಢ್ಯತೆಯನ್ನು ತೊಡೆದುಹಾಕಲು ಮುಂದಾಗಿದ್ದಾರೆ.

ಅಂದರೆ ಕಿತ್ತೂರು ಕಿತ್ತೂರು ಉತ್ಸವಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆ ಇದ್ದು, ಈ ಹಿಂದಿನ ಸಿಎಂ ಆಗಿದ್ದ ‌ಬಂಗಾರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮಾತ್ರ ಭೇಟಿ ನೀಡಿದ್ದರು. ಆನಂತರ ಯಾವೊಬ್ಬ ಸಿಎಂ ಕೂಡ ಕಿತ್ತೂರು ಉತ್ಸವಕ್ಕೆ ತೆರಳಿರಲಿಲ್ಲ. ಇಂತಹದ್ದೊಂದು ಮೂಢನಂಬಿಕೆ ತೊಡೆದುಹಾಕಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇಂದು ಸಂಜೆ ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ಆಗಮಿಸಿ, ಬಳಿಕ ರಸ್ತೆಮಾರ್ಗವಾಗಿ ಕಿತ್ತೂರಿಗೆ ಆಗಮಿಸಲಿದ್ದಾರೆ.