ಜ್ಯೂಸ್ ಪ್ಯಾಕೆಟ್ ಹೆಸರಲ್ಲಿ ಬೆಂಗಳೂರು ನಗರಕ್ಕೆ ಸರಬರಾಜು ಆಗುತ್ತಿದ್ದ ನಕಲಿ ಸಿಗರೇಟ್‌ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಐಟಿಸಿ ಕಂಪನಿ ಅಧಿಕಾರಿಗಳ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡ್‌ನ್ ಪೊಲೀಸರು ದಾಳಿ ನಡೆಸಿದ್ದು, ಯೂಸಫ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ.. ಕಾರ್ಯಾಚರಣೆಯಲ್ಲಿ ಬರೋಬ್ಬರಿ 27 ಲಕ್ಷ ಮೌಲ್ಯ ನಕಲಿ ಸಿಗರೇಟ್ ವಶಕ್ಕೆ ಪಡೆಯಲಾಗಿದೆ.. ಸೌರಾಷ್ಟ್ರ ಟ್ರಾನ್ಸ್‌ಪೋರ್ಟ್ ಹೆಸರಿನಲ್ಲಿ ದೆಹಲಿಯಿಂದ ನಕಲಿ ಸಿಗರೇಟ್ ಬರುತ್ತಿತ್ತು ಎನ್ನಲಾಗಿದೆ.. ಪ್ರಕರಣ ಸಂಬಂಧ ಓರ್ವನ ಬಂಧಿಸಿದ್ದು, ಪೊಲೀಸರು ತನಿಖೆಕೈಗೊಂಡಿದ್ದಾರೆ..