ವಿಶ್ವದ ಅತೀದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಆಗಮಿಸುತ್ತಲೇ ಇದ್ದಾರೆ.. 144 ವರ್ಷಗಳಿಗೊಮ್ಮ ನಡೆಯುತ್ತಿರುವ ಮಹಾಕುಂಭ ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಜನರು ಬಂದಿದ್ದಾರೆ.. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಭಕ್ತಸಾಗರವೇ ಹರಿದು ಬರ್ತಿದ್ದು ಕುಂಭಮೇಳ ಆರಂಭವಾಗಿ ಇಂದಿಗೆ ಅಂದರೆ 19 ದಿನಕ್ಕೆ ಬರೋಬ್ಬರಿ 33 ಕೋಟಿ ಭಕ್ತರು ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.. ಕಾಲ್ತುಳಿತದ ಅವಘಡ ನಂತರವೂ ಭಕ್ತರ ಸಂಖ್ಯೆಯಲ್ಲಿ ಏನು ಕಡಿಮೆಯಾಗಿಲ್ಲ.. ದಿನದಿಂದ ದಿನಕ್ಕೆ ಮಹಾಕುಂಭ ಕಣ್ತುಂಬಿಕೊಳ್ಳಲು ಜನರು ಆಗಮಿಸುತ್ತಲೇ ಇದ್ದು, ಫೆಬ್ರವರಿ 26ರಂದು ಮುಗಿಯಲಿರುವ ಕಾರ್ಯಕ್ರಮಕ್ಕೆ ಒಟ್ಟು 45 ಕೋಟಿ ಭಕ್ತರು ಬರಬಹುದು ಎಂದು ಅಂದಾಜಿಸಲಾಗಿತ್ತು, ಪ್ರಯಾಗ್‌ರಾಜ್‌ಗೆ ಈಗಾಗಲೇ 33 ಕೋಟಿ ಜನರು ಬಂದು ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದು, ಒಟ್ಟಾರೆ 50 ಕೋಟಿ ಭಕ್ತರು ಮಹಾಕುಂಭದಲ್ಲಿ ಭಾಗಿಯಾಗಬಹುದು ಎನ್ನಲಾಗಿದೆ..