ಬಾಕು: ಎಮೆರ್ಜೆನ್ಸಿ ಲ್ಯಾಂಡಿಂಗ್ ವೇಳೆ ಕಜಕಿಸ್ತಾನ್‌ನ ಅಕ್ಟೌ ಬಳಿ ಪ್ರಯಾಣಿಕರಿದ್ದ ವಿಮಾನವೊಂದು ಪತನಗೊಂಡಿದೆ.. ವಿಮಾನದಲ್ಲಿದ್ದ 110 ಪ್ರಯಾಣಿಕರ ಪೈಕಿ 42ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.. ಸಾವಿನ ಸಂಖ್ಯೆ ಇನ್ನೂ ಹಚ್ಚಾಗುವ ಸಾಧ್ಯತೆ ಇದೆ.. ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಪ್ರಯಾಣ ಬೆಳೆಸಿತ್ತು.. ಆದರೆ ಕಜಕಿಸ್ತಾನದ ಅಕ್ತಾವು ಬಳಿ ವಿಮಾನ ಏಕಾಏಕಿ ಪತನಗೊಂಡಿದೆ.. ಪೈಲಟ್ ನಿಯಂತ್ರಣ ಕಳೆದುಕೊಂಡ ವಿಮಾನ ನೋಡ ನೋಡುತ್ತಲೇ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ.. ಭೀಕರ ಘಟನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ..